ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗ ಪ್ರಿಪೇಡ್ ಆಟೋ ಸೌಲಭ್ಯವನ್ನು ಒದಗಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಂಚಾರಿ ಪೊಲೀಸ್ ನಿರೀಕ್ಷಕರಾದ ದೇವರಾಜ್ ಹೇಳಿದ್ದಾರೆ.
ಅವರು ಇಂದು ಬೆಳಗಿನ ಜಾವ ತಮ್ಮ ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಅನಿರೀಕ್ಷಿತವಾಗಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.


ಅಲ್ಲಿ ಈಗಾಗಲೇ ಪ್ರಿಪೇಡ್ ಆಟೋ ಸೌಲಭ್ಯವಿದ್ದರೂ ಕೂಡ ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದ್ದರು. ಬೆಳಗಿನ ಜಾವ ಐದು ಮೂವತ್ತರ ತನಕ ಮೀಟರ್ ಮೇಲೆ ಒಂದುವರೆ ಪಟ್ಟು ತೆಗೆದುಕೊಳ್ಳುವ ಅವಕಾಶವಿದ್ದರೂ ಸಹ ಕೆಲವು ಆಟೋ ಚಾಲಕರು ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಟ್ರಾಫಿಕ್ ಪೊಲೀಸರು ಕೇವಲ 20 ನಿಮಿಷದಲ್ಲಿ 115 ಪ್ರಯಾಣಿಕರು ಪ್ರಿಪೇಡ್ ಸೌಲಭ್ಯ ಪಡೆಯುವಂತೆ ಮಾಡಿದ್ದಾರೆ ಅದೇ ರೀತಿ ಕೇವಲ ಒಂದು ಗಂಟೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ 168 ಪ್ರಯಾಣಿಕರು ಪ್ರಿಪೇಡ್ ಆಟೋ ವನ್ನು ಬಳಸಿದ್ದಾರೆ. ರೈಲು ಮತ್ತು ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಪ್ರಿಪೇಡ್ ಆಟೋ ಬಳಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಮತ್ತು ಆಟೋ ಚಾಲಕರಿಗೂ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ತಾಕಿದ್ದು ಮಾಡಿದ್ದಾರೆ ನಿಯಮ ಮೀರಿ ವರ್ತಿಸಿದರೆ ಕೇಸು ದಾಖಲಿಸಿ ಕೋರ್ಟಿಗೆ ಹಾಜರು ಪಡಿಸಲಾಗುವುದು ಎಂದು ಚಾಲಕರಿಗೆ ಎಚ್ಚರಿಕೆ ನೀಡಿದ್ದು ಸಾರ್ವಜನಿಕರಲ್ಲಿ ದೇವರಾಜ್ ಅವರ ತಂಡದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *