ಮಂಜುನಾಥ್ ಶೆಟ್ಟಿ…

ಶಿವಮೊಗ್ಗದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಮಹಿಳಾ ದಸರಾ ಸಮಿತಿಯ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಕ್ರೀಡಾಕೂಟಕ್ಕೆ ಪೌರಕಾರ್ಮಿಕ ಹಿರಿಯ ಮಹಿಳೆಯರಾದ ರಾಧಾ, ಶಾಂತಮ್ಮ ಹಾಗೂ ನರಸಮ್ಮ ಅವರು ಚಾಲನೆ ನೀಡಿದರು.
ಸಾಕ್ಷಾತ್ ದೇವಿ ಅಲಂಕಾರ, ಮನೋರಂಜನಾ ಕ್ರೀಡೆಗಳು, ಅಂತ್ಯಾಕ್ಷರಿ, ಮೆಹೆಂದಿ ಸೇರಿದಂತೆ ಹಲವು ಬಗೆಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಸುವರ್ಣಾ ಶಂಕರ್, ಗ್ಯಾರಂಟಿ ಯೋಜನೆಗಳ ನಿರ್ದೇಶಕರಾದ ಅರ್ಚನಾ ನಿರಂಜನ್, ಮಹಿಳಾ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅನುಪಮಾ.ಟಿ.ಆರ್.
ಹಾಗೂ ಸಮಿತಿ ಸದಸ್ಯರುಗಳಾದ ನಾಗಲಕ್ಷ್ಮಿ, ರೂಪ, ರೇವತಿ, ಗೀತಾ, ರೇಣು, ಇತರರು ಉಪಸ್ಥಿತರಿದ್ದರು.