ಮಂಜುನಾಥ್ ಶೆಟ್ಟಿ…

ಕರ್ನಾಟಕ ಸರ್ಕಾರದ ಗ್ಯಾರಂಟಿ‌ ಯೋಜನೆಯ ಅನುಷ್ಠಾನ‌ ಸಮಿತಿಯ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾಗಿ ವಿನಯ್ ತಾಂದ್ಲೆ ಅಧಿಕಾರ ಸ್ವೀಕಾರ
ಶಿವಮೊಗ್ಗ: ಕರ್ನಾಟಕ‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾಗಿ ಕಾಂಗ್ರೆಸ್ ನ ಯುವ ಮುಖಂಡ ವಿನಯ್ ತಾಂದ್ಲೆ ಗುರುವಾರ ಅಧಿಕಾರ ಸ್ವೀಕರಿಸಿದರು.


ತಾಲ್ಲೂಕು ಕಚೇರಿಯಲ್ಲಿರು ಗ್ಯಾರಂಟಿ‌ಯೋಜನೆ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ ಅವರು, ಪಕ್ಷದ ನಾಯಕರು ಮತ್ತು ಮುಖಂಡರು ವಿಶೇಷವಾಗಿ ಸಚಿವ ಮಧು ಬಂಗಾರಪ್ಪನವರು ಮತ್ತು ಹಿರಿಯರಾದ ಎಂ.ಶ್ರೀಕಾಂತ್ ರವರು, ನನಗೆ ಈ ಸ್ಥಾನ ಕೊಡಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಮೇಲೆ ಅವರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ ಎಂದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಂ.ಶ್ರೀಕಾಂತ್, ಹೆಚ್.ಟಿ.ಹಾಲಪ್ಪ, ಇಸ್ಮಾಯಿಲ್ ಖಾನ್, ಶರತ್ ಮರಿಯಪ್ಪ ಮೊದಲಾದವರು ಶುಭ ಕೋರಿದರು.

Leave a Reply

Your email address will not be published. Required fields are marked *