Author: Nuthan Moolya

ಬೂದಿ ಮುಚ್ಚಿದ ಕೆಂಡ ಹಳೆ ಶಿವಮೊಗ್ಗದಲ್ಲಿ ಕಟ್ಟೆಚ್ಚರ, ನಗರದಾದ್ಯಂತ ಪೊಲೀಸ್ ಬಂದೋಬಸ್ತ್…

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ, ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ನಗರಾದ್ಯಂತ ನಿಷೇಧಾಜ್ಞೆ ಮತ್ತು ಕರ್ಫ್ಯೂ ಜಾರಿಗೊಳಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಪೊಲೀಸ್ ಬಿಗಿ ಬಂದೋ ಬಸ್ತ್ ಮುಂದುವರೆದಿದೆ. ಆದರೆ, ಕರ್ಫ್ಯೂ ನಗರದ…

ಸಚಿವ ಈಶ್ವರಪ್ಪ ರಾಜೀನಾಮೆಗೆ ಕೆ.ಬಿ. ಪ್ರಸನ್ನಕುಮಾರ್ ಆಗ್ರಹ…

ಶಿವಮೊಗ್ಗ: ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾದರೆ ಸಾಲದು, ಆದರ ಹಿಂದಿನ ಷಡ್ಯಂತ್ರ ಬಯಲಾಗಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹರ್ಷ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಬೇಕು.…

ಕೈಗಾರಿಕ ವಿಶ್ವ ಭೂಪಟದಲ್ಲಿ ಶಿವಮೊಗ್ಗ ಇದೆ-ಮಧುಕರ್ ಜೋಯ್ಸ್…

ಶಿವಮೊಗ್ಗ ನಗರದ ಕೈಗಾರಿಕ ಕ್ಷೇತ್ರದಿಂದ ವಿಶ್ವ ಭೂಪಟದಲ್ಲಿ ಶಿವಮೊಗ್ಗ ನಗರವು ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ನಗರದ ಕೈಗಾರಿಕೋದ್ಯಮಿಗಳು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕೊಡಮಾಡಿದ ‘ವಕೇಶನಲ್ ಅವಾರ್ಡ’ ಪ್ರಶಸ್ತಿ ಸ್ವೀಕರಿಸಿದ ಮಲ್ನಾಡ್ ಫೌಂಡ್ರಿ ಮಾಲಿಕರಾದ ಶ್ರೀಯುತ ಮಧುಕರ್ ಜೋಯಿಸ್ ಮಾತನಾಡಿದರು.…

197 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಸಂಭ್ರಮ -“ಸಾಹಿತ್ಯಾತ್ಮಕ ಸೃಜನಶೀಲತೆಗೆ ಸಾಹಿತ್ಯ ಗ್ರಾಮ ಪೂರಕ ಶಕ್ತಿಯಾಗಿದೆ” : ಕೆ.ಬಿ.ಪ್ರಸನ್ನಕುಮಾರ್…

ಶಿವಮೊಗ್ಗ : ಸಾಹಿತ್ಯಾತ್ಮಕ ಸೃಜನಶೀಲ ಸಂಘಟನೆಗೆ ಸಾಹಿತ್ಯ ಗ್ರಾಮ ಪೂರಕ ಶಕ್ತಿಯಾಗಿದೆ ಎಂದು ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ ಅಭಿಪ್ರಾಯಪಟ್ಟರು ಭಾನುವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ…

ಆತ್ಮವಿಶ್ವಾಸವೇ ಜೀವನದಲ್ಲಿನ ಯಶಸ್ಸಿನ ಗುಟ್ಟು-ಚೇತನ್ ರಾಮ್…

ಶಿವಮೊಗ್ಗ: ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವಿಕಸನ ವ್ಯಕ್ತಿತ್ವದಲ್ಲಿ ಅಡಗಿದೆ. ಮನುಷ್ಯ ಮೊದಲು ತನ್ನೊಳಗೆ ತಾನು ವಿಕಸನಗೊಳಿಸಬೇಕು. ಆತ್ಮವಿಶ್ವಾಸದಿಂದ ಇರಬೇಕು. ಯಾವತ್ತು ಸೋಲಿಗೆ ಹೆದರಬಾರದು. ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು ಎಂದು ಅಂತರಾಷ್ಟ್ರೀಯ ತರಬೇತುದಾರ, ಲೇಖಕ ಆರ್.ಎ.ಚೇತನ್‌ರಾಮ್ ಹೇಳಿದರು. ಶಿವಮೊಗ್ಗ ನಗರದ ಕಲ್ಲಳ್ಳಿಯ…

ದೇಶಿ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ-ಡಾ.ಹಾಲಮ್ಮ…

ಭಾರತ ಗ್ರಾಮೀಣ ಸೊಗಡಿನ ದೇಶ. ನಮ್ಮಲ್ಲಿ ಇರುವಷ್ಟು ಸಂಸ್ಕೃತಿ ಬೇರೆ ಎಲ್ಲೂ ಇಲ್ಲ ಅದನ್ನು ಉಳಿಸಿ ಬೆಳೆಸ ಬೇಕಾದ ಜವಾಬ್ದಾರಿ ಮುಂದಿನ ಪ್ರಜೆಗಳಾದ ತಮ್ಮ ಮೇಲಿದೆ ಎಂದು ಸಹ್ಯಾದ್ರಿ ಕಾಲೇಜಿನ ಎನ್.ಎಸ್.ಎಸ್.ಕ್ಯಾಂಪ್ ಶಿಬಿರಾಧಿಕಾರಿ ಕೊನಗವಳ್ಳಿಯಲ್ಲಿ ಆಯೋಜಿಸಿರುವ ಡಾ.ಹಾಲಮ್ಮನವರು ವೈಹೆಚ್ ಐಎ ತರುಣೋದಯ…

ಶಿವಮೊಗ್ಗ ನಗರದಲ್ಲಿ ಎರಡು ದಿನ ಕರ್ಫ್ಯೂ ಜಾರಿ…

ಶಿವಮೊಗ್ಗ ನಗರದಲ್ಲಿ ಇವತ್ತು ರಾತ್ರಿಯಿಂದ ದಿನಾಂಕ 23 ರ ಬೆಳಗ್ಗೆ ತನಕ ಕರ್ಫ್ಯೂ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ನಿನ್ನೆ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಮುಂಜಾಗ್ರತೆಯಾಗಿ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ.…

ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ…

ಶಿವಮೊಗ್ಗ: ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಫೆ.23ರ ರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಫೆ.23ರ ರಾತ್ರಿ…

ಹತ್ಯೆ ಆರೋಪಿಗಳ ಸುಳಿವು, ಶೀಘ್ರವೇ ಬಂಧನ-ಗೃಹ ಸಚಿವ ಆರಗ ಜ್ಞಾನೇಂದ್ರ…

ಶಿವಮೊಗ್ಗ: ಹಿಂದೂ ಸಂಘಟನೆಯ ಯುವಕ ಹರ್ಷನ ಹತ್ಯೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಲಾಗುವುದು. ಕಾನೂನು ಪ್ರಕಾರ ಅವರಿಗೆ ಶಿಕ್ಷೆ ಕೊಡಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಹರ್ಷನ…

ಶಿವಮೊಗ್ಗ ನಗರದಲ್ಲಿ ದಿ 21 ರಂದು ಶಾಲಾ ಕಾಲೇಜುಗಳಿಗೆ ರಜೆ-ಡಾ. ಸೆಲ್ವ ಮಣಿ ಆದೇಶ…

ಶಿವಮೊಗ್ಗ ನಗರಾದ್ಯಂತ ದಿನಾಂಕ 21 ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಮೊನ್ನೆ ರಾತ್ರಿ ಸೂಳೇ ಬೈಲಿನಲ್ಲಿ ನಡೆದ ಜಗಳದಲ್ಲಿ ಇಬ್ಬರ ಹತ್ಯೆಯಾಗಿತ್ತು ಮತ್ತು ನಿನ್ನೆ ರಾತ್ರಿ ನಡೆದ ಭಜರಂಗ ದಳ ಕಾರ್ಯಕರ್ತನ ಹತ್ಯೆ…