ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಿಗೆ ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಧಿಗೆ ಭಾಗದ ಐದು ಪಂಚಾಯಿತಿಗಳು ಉಂಬಳೇಬೈಲು ಕಡೇಕಾಲ್ ಮತ್ತೂರು ಗಾಜನೂರು ಒಳಪಡುತ್ತವೆ ಅಲ್ಲಿಯೂ ಸಹ ಕೋರೋನ ಕಾಯಿಲೆಯಿಂದ ಜನರು ಸಂಕಷ್ಟದಲ್ಲಿದ್ದಾರೆ, ಆ ಭಾಗದ ಜನರು ಸಹ ಬೆಂಬಲಿಸಿ ಆಶೀರ್ವದಿಸಿದ್ದಾರೆ ಎಂಬ ಕನಿಷ್ಠ ಮಟ್ಟದ ಪರಿಜ್ಞಾನವೂ ಇಲ್ಲ , ಕಳೆದ ಸುಮಾರು ನಲವತ್ತು ದಿನಗಳಿಂದ ಕೊರೋನಾ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿರುವ ಈ ಭಾಗದ ಯಾವುದೇ ಗ್ರಾಮಗಳಿಗೆ ಭೇಟಿ ನೀಡದೆ, ರಾಜ್ಯ ಸರ್ಕಾರ ಮಾಡಿರುವಂತಹ ಲಾಕ್ಡೌನ್ ಸಂದರ್ಭದಲ್ಲಿ ಜನರ ಯಾವುದೇ ಸಮಸ್ಯೆಯ ಬಗ್ಗೆ ಗಮನಹರಿಸುವಂತ ಕೆಲಸವಾಗಲಿ ಅಥವಾ ಕೋರೋ ನ ಕಾಯಿಲೆ ಬಗ್ಗೆ ಜನರಲ್ಲಿ ಇರುವಂತ ಆತಂಕವನ್ನು ನಿವಾರಿಸುವಂತ ಕೆಲಸವಾಗಲಿ ಇದುವರೆಗೂ ಮಾಡಿಲ್ಲ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಭಾಗದ ಸಮಸ್ತ ಜನರ ಹಿತವನ್ನು ಕಾಪಾಡಬೇಕಾದ ಆಡಳಿತಾರೂಢ ಬಿ ಜೆ ಪಿ ಪಕ್ಷದ ಶಾಸಕರು ಭಾಗದ ಸಮಸ್ತ ಜನರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರಾದ ಅನಿಲ್ ಸಿ ಉಂಬಳೇಬೈಲು ನಾರಾಯಣಗೌಡ ಪದ್ಮನಾಭ ಸುರೇಶ್ ಯುವರಜ್ ಗೌಡ ಶಕೀಲ್ ಸಲೀಂ ಊರಿನ ಗ್ರಾಮಸ್ಥರು ಮಾದ್ಯಮದ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153