ಶಿವಮೊಗ್ಗದ ಪುರಾತನ ದೇವಸ್ಥಾನದಲ್ಲಿ ಒಂದಾದ ದುರ್ಗಿಗುಡಿಯ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ನಡೆಯಿತು.ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.ಕರೋನ ಹಿನ್ನೆಲೆಯಲ್ಲಿ 2 ವರ್ಷದ ಶ್ರೀರಾಮನವಮಿ ಸಾಂಕೇತಿಕವಾಗಿ ನಡೆಸಲಾಗಿತ್ತು.

ಅಡ್ಡ ಬಾಯ್ಸ್… ಜೈ ಶ್ರೀರಾಮ…

ಈ ವರ್ಷವೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರಾಮನವಮಿಯ ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.ದೇವಸ್ಥಾನವು ಸುಮಾರು 95 ವರ್ಷಗಳ ಪೂರೈಸಿದ ಹಿನ್ನೆಲೆ ರಾಮ ದೇವರಿಗೆ 100 ಲೀ ಕ್ಷೀರಾಭಿಷೇಕವನ್ನು ಮಾಡಲಾಯಿತು.ಸಂಜೆ ಅಡ್ಡ ಬಾಯ್ಸ್ ತಂಡದಿಂದ ಭಕ್ತಾದಿಗಳಿಗೆ ಫಲಾಹಾರ ವಿತರಣೆ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ…