ಇತ್ತೀಚೆಗೆ ಕೇರಳದ ಆಲಪ್ಪಿ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಶಿವಮೊಗ್ಗದ ಸುಲೋಚನಾ ಅವರು ಭಾಗವಹಿಸಿ ಸ್ಕ್ವಾಟ್ 120 ಕೆಜಿ ಭಾರವನ್ನು ಎತ್ತಿ ಚಿನ್ನದ ಪದಕಗಳಿಸಿದ್ದಾರೆ.
ಹಾಗೆಯೇ ಬೆಂಚ್ ಪ್ರೆಸ್ 52.5 ಕೆಜಿ ಭಾರವನ್ನು ಎತ್ತಿ ಕಂಚಿನ ಪದಕಗಳಿಸಿದ್ದಾರೆ. ಮತ್ತು ಡೆಡ್ ಲಿಫ್ಟ್ ನಲ್ಲಿ 137 ಕೆಜಿ ಭಾರವನ್ನು ಎತ್ತಿ ಚಿನ್ನದ ಪದಕವನ್ನು ಎತ್ತಿದ್ದಾರೆ. ಒಟ್ಟಾರೆಯಾಗಿ ಚಿನ್ನದ ಪದಕಗಳನ್ನು ಗೆದ್ದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸುಲೋಚನರವರು ನಮ್ಮ ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಸಿದ ಹೆಣ್ಣುಮಗಳೆಂಬುದು ಹೆಮ್ಮೆಯ ವಿಷಯವಾಗಿದೆ.
ಇವರಿಗೆ ಶಿವಮೊಗ್ಗ ಜಿಲ್ಲಾ ಪವರ್ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷರು ಪ್ರಕಾಶ್ ಕಾರಂತ್ ಕಾರ್ಯದರ್ಶಿ ಕೆ ಭಾಸ್ಕರ್ ರವರು ಅಭಿನಂದಿಸಿರುತ್ತಾರೆ.