ಸಾಗರ ತಾಲ್ಲೂಕಿನ ಕಾರು ಚಾಲಕರ ಸಂಘದ ಚಾಲಕರಿಗೆ,ಪದಾಧಿಕಾರಿಗಳಿಗೆ ಮಾಜಿ ಶಾಸಕರು,ಕೆಪಿಸಿಸಿ ವಕ್ತಾರರು ಆದ ಬೇಳೂರು ಗೋಪಾಲಕೃಷ್ಣ ಅವರು ಮಾನ್ಯ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ ಸುಮಾರು 131 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. ಇತ್ತೀಚಿಗೆ ನಿಧನರಾದ ಮೂರು ಜನ ಚಾಲಕರ ಕುಟುಂಬಕ್ಕೆ ತಲಾ 10,000 ರೂ ಸಹಾಯಧನ ಘೋಷಿಸಿದರು. ಈ ಸಂಧರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಸೂರನಗದ್ದೆ, ಕಾರ್ಯದರ್ಶಿ ಚಂದ್ರು , ವಿ,ಶಂಕರ್ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು, OBC ನಗರಘಟಕದ ಅಧ್ಯಕ್ಷರಾದ ಸಂತೋಷ್ ಸದ್ಗುರು, ವಿಜಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಜಯ್, ಸದ್ದಾಂ ಹಲವರು ಉಪಸ್ಥಿತರಿದ್ದರು .
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153