ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರ ಆಶಯದಂತೆ ಸಮಸ್ತ ಸರ್ಕಾರಿ ನೌಕರರಿಗೆ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ಜಿಲ್ಲಾ ಬೋಧನಾ ಆಸ್ಪತ್ರೆಯ ಎಲ್ಲಾ ಅಧಿಕಾರಿ ನೌಕರರಿಗೆ ಉಚಿತವಾಗಿ ರಾಷ್ಟ್ರಧ್ವಜವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಶ್ರೀಧರ್ ವಹಿಸಿದ್ದರು.ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ವಿ ಪ್ರಭಾಕರ್,ಡಾ. ಸಿದ್ದನ ಗೌಡ ,ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ರಾಜಮ್ಮ ಶ್ರೀ ಗೋಪಿನಾಥ್, ಶ್ರೀ ಮಲ್ಲಿಕಾರ್ಜುನ್ ಮತ್ತಿತರ ಸಿಬ್ಬಂದಿಗಳು ಹಾಜರಿದ್ದರು