ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಶೀಘ್ರವಾಗಿ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಹಿಂದಿರುಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ CEIR (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದ್ದು.

ಪೊಲೀಸ್ ನಿರೀಕ್ಷಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು CEIR Portal ಮೂಲಕ ಈ ರೀತಿಯ ಒಟ್ಟು 03 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿರುತ್ತಾರೆ. ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಸಮ್ಮುಖದಲ್ಲಿ ಪತ್ತೆ ಮಾಡಲಾದ ಮೊಬೈಲ್ ಗಳನ್ನು, ಮಾಲೀಕರುಗಳಾದ ಹನುಮಂತ ರಾವ್, ಮಿಥುನ್ ಮತ್ತು ಶ್ರೀನಿಧಿ ರವರಿಗೆ ಹಿಂದಿರುಗಿಸಲಾಯಿತು.

ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಸಾರ್ವಜನಿಕರು CEIR Portal ಗೆ ಲಾಗಿನ್ ಆಗಿ ದೂರನ್ನು ದಾಖಲಿಸಲು ಕೋರಲಾಗಿದೆ.

ವರದಿ ಪ್ರಜಾ ಶಕ್ತಿ…