ಕರ್ನಾಟಕ ಸರ್ಕಾರ ಈ ಹಿಂದೆ ಹೊರಟಿಸಿದ್ದ ನೋಟಿಫಿಕೇಶನ್ ಪ್ರಕಾರ ಫೆಬ್ರವರಿ 17 ರ ಒಳಗೆ ಕಡ್ಡಾಯವಾಗಿ ಎಲ್ಲಾ ವಾಹನಗಳು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹೊಂದಬೇಕು ಎಂದಿತ್ತು.

ಈಗ ರಾಜ್ಯ ಸರ್ಕಾರ ಹೊರಡಿಸಿರುವ ನೋಟಿಫಿಕೇಶನ್ ಪ್ರಕಾರ ಎಚ್ಎಸ್ಆರ್ಪಿ ಪ್ಲೇಟ್ ಅಳವಡಿಕೆಯ ಗರುಗಿನ ದಿನಾಂಕವನ್ನು 17.02.2024 ರಿಂದ 31.05.2024 ಕ್ಕೆ ಮುಂದುವರಿಸಲಾಗಿದೆ.

ಇದರಿಂದ ವಾಹನ ಮಾಲೀಕರಿಗೆ ನಿರಾಳವಾಗಿದೆ. ನಡುವಿನ ದಿನಾಂಕ ಸಮೀಪಿಸಿದಂತೆ ಸರ್ವರ್ ನಲ್ಲಿ ತುಂಬಾ ಸಮಸ್ಯೆಗಳು ಕಾಣಿಸಿಕೊಂಡಿದ್ದು ನೋಂದಣಿ ಯಾಗುತ್ತಿರಲಿಲ್ಲ.

ಇದರಿಂದ ಅನೇಕ ಗೊಂದಲಗಳು ಉಂಟಾಗಿದ್ದು ಈಗ ರಾಜ್ಯ ಸರ್ಕಾರದ ನೋಟಿಫಿಕೇಶನ್ ಇಂದಾಗಿ ವಾಹನ ಮಾಲೀಕರಿಗೆ ಸಮಯ ಸಿಕ್ಕಂತಾಗಿದೆ.

ವರದಿ ಪ್ರಜಾ ಶಕ್ತಿ