ಲೋಕಸಭಾ ಚುನಾವಣೆ  2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ನಗರದಲ್ಲಿ ಪಥಸಂಚಲನ ಮಾಡಲಾಯಿತು
ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆರವರ ನೇತೃತ್ವದಲ್ಲಿ  ದಿನಾಂಕ 21-03-2024 ರ ಸಂಜೆ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪಥ ಸಂಚಲನವನ್ನು ಹಮ್ಮಿಕೊಂಡಿದ್ದು, ಸದರಿ ಪಥಸಂಚಲನವನ್ನು ಎಸ್ ಎನ್ ವೃತ್ತದಿಂದ ಪ್ರಾರಂಭಿಸಿ ಗಾಂಧಿ ಬಜಾರ್, ಆರ್ ಎಸ್ ಪಾರ್ಕ್, ಸೀಗೆಹಟ್ಟಿ, ಓ ಟಿ ರಸ್ತೆ, ಎ ಎ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ ಮಹಾವೀರ ವೃತ್ತದಿಂದ ನೆಹರು ಕ್ರೀಡಾಂಗಣಕ್ಕೆ ಬಂದು ಮುಕ್ತಾಯ ಮಾಡಲಾಯಿತು.

ಸದರಿ ಪಥ ಸಂಚಲನದಲ್ಲಿ ಶ್ರೀ ಬಾಬು ಆಂಜನಪ್ಪ, ಪೋಲಿಸ್ ಉಪಾಧೀಕ್ಷಕರು, ಶಿವಮೊಗ್ಗ- ಎ ಉಪ ವಿಭಾಗ, ಶ್ರೀ ಪ್ರಕಾಶ್ ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಶಿವಮೊಗ್ಗ, ಶ್ರೀ ರುದ್ರೇಶ್, ಆರ್.ಪಿ.ಐ, ಡಿಎಆರ್ ಶಿವಮೊಗ್ಗ,  ಶ್ರೀ ಆನಂದ್, ಆರ್.ಪಿ. ಐ, ಡಿಎಆರ್ ಶಿವಮೊಗ್ಗ ಶ್ರೀ ರವಿ ಪಾಟೀಲ್*, ಪಿಐ,ದೊಡ್ಡಪೇಟೆ ಪೊಲೀಸ್ ಠಾಣೆ, ಮತ್ತು ಪಿಎಸ್ಐ ಹಾಗೂ ಅಧಿಕಾರಿ ಸಿಬ್ಬಂದಿಗಳು ಹಾಗೂ ಕೆ.ಎಸ್.ಆರ್ ಪಿ ತುಕಡಿಯ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ