ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ನಾಯಕರನ್ನು ಆರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥನಾಯಕ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏ.05 ರಂದು ಮತದಾನ ಕುರಿತು ಜಾಗೃತಿ ಮೂಡಿಸಲು ನೆಹರೂ ಮೈದಾನದಿಂದ ಏರ್ಪಡಿಸಲಾಗಿದ್ದ ಮ್ಯಾರಾಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇ 07 ರಂದು ತಾವೆಲ್ಲವರೂ ತಪ್ಪದೇ ಮತಗಟ್ಟೆಗಳಿಗೆ ಬಂದು ಮತದಾನ ಮಾಡಬೇಕು. ಇತ್ತೀಚೆಗೆ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ನಮ್ಮ ಜಿಲೆಂiÀಲ್ಲಿ ಹೆಚ್ಚು ಪ್ರಮಾಣದ ಮತದಾನ ಆಗಲೆಂದು ಸ್ವೀಪ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂದು ಅಪರೂಪದ ಮ್ಯಾರಾಥಾನ್ ಆಯೋಜನೆ ಮಾಡಲಾಗಿದೆ.
ಮತದಾನ ಮಾಡಲು ಇಚ್ಚೆ ಇರುವವರಿಗೆ ಮತದಾನ ಹಕ್ಕು ಆಗುತ್ತದೆ. ಇತರರು ಮತದಾನ ಮಾಡಬೇಕೆಂದು ಪ್ರೇರೇಪಿಸುವುದು ಕರ್ತವ್ಯ ಆಗುತ್ತದೆ. ಯುವಜನತೆ ದೇಶದ ದೊಡ್ಡ ಶಕ್ತಿ ಮತ್ತು ಜನರನ್ನು ತಲುಪಲು ದೊಡ್ಡ ಮಾಧ್ಯಮ. ಆದ್ದರಿಂದ ನಿಮ್ಮ ಮೂಲಕ ಎಲ್ಲರನ್ನು ತಲುಪುವ ಕೆಲಸ ಮಾಡಾಗುತ್ತಿದೆ.
ಮೊದಲು 21 ವರ್ಷ ತುಂಬಿದವರಿಗೆ ಮಾತ್ರ ಮತದಾನದ ಅವಕಾಶ ಇತ್ತು. ನಂತರ ಸಂವಿಧಾನಕ್ಕೆ ತಿದ್ದುಪಡಿ ತಂದು 18 ವರ್ಷ ತುಂಬಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ನಾವೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂಬ ಉದ್ದೇಶದಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದು ನೋಟಾ(ಓಔಖಿಂ) ಮತದಾನದ ಅವಕಾಶ ನೀಡಿದೆ. ಮತದಾರರಿಗೆ ಒಂದು ವೇಳೆ ಯಾವ ಅಭ್ಯರ್ಥಿಗೂ ಮತ ಹಾಕಲು ಇಷ್ವವಿಲ್ಲದಿದ್ದರೆ ನೋಟಾ ಬಳಕೆ ಮಾಡಬಹುದು ಎಂದರು.
ನಾವು ಆರಿಸುವ ಜನಪ್ರತಿನಿಧಿಗಳು ಕಾನೂನು ರೂಪಿಸುವವವರಾದ್ದರಿಂದ ಅತ್ಯಂತ ಜವಾಬ್ದಾರಿಯಿಂದ ನಾಯಕರನ್ನು ಆರಿಸಬೇಕಿದ್ದು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಹವಹಿಸಬೇಕು ಹಾಗೂ ಇತರರನ್ನೂ ಪ್ರೇರೇಪಿಸುವ ಕೆಲಸ ಆಗಬೇಕು ಎಂದರು.
ಮತದಾನದ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಹಾಗೂ ವಿವಿಧತೆಯಲ್ಲಿ ಐಕ್ಯತೆ ಸಾರುವ ‘ನಾ ಭಾರತ ಭಾರತ ನನ್ನಲ್ಲಿ’ ಗೀತೆಯನ್ನು ಹೇಳಿಕೊಡಲಾಯಿತು. ಇದೇ ಸಂದರ್ಭದಲ್ಲಿ ಮಾಚೇನಹಳ್ಳಿ ಕೆಎಸ್‍ಆರ್‍ಪಿ ತಂಡವು ಬ್ಯಾಂಡ್ ಮೂಲಕ ‘ನಾ ಭಾರತ’ ಗೀತೆಯನ್ನು ನುಡಿಸಿ ಎಲ್ಲರ ಗಮನ ಸೆಳೆದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು. ಹಾಗೂ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸಿವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ದೂರು ನೀಡಬಹುದು. ಅಥವಾ 1950 ಗೆ ಸಹ ಕರೆ ಮಾಡಿ ದೂರು ಸಲ್ಲಿಸಬಹುದು ಎಂದರು.
ಘೋಷಣೆಗಳ ಮೂಲಕ ಜಾಗೃತಿ…
ಮ್ಯಾರಾಥಾನ್‍ನಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದು, ಮ್ಯಾರಾಥಾನ್ ನೆಹರು ಕ್ರೀಡಾಂಗಣದಿಂದ ಮಹಾವೀರ ಸರ್ಕಲ್, ಶಿವಪ್ಪನಾಯಕ ಸರ್ಕಲ್, ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್, ಶಿವಮೂರ್ತಿ ಸರ್ಕಲ್ ಮೂಲಕ ಸಾಗಿ ಬಂದು ನೆಹರೂ ಮೈದಾನ ತಲುಪಿತು.
ಮ್ಯಾರಾಥಾನ್‍ನಲ್ಲಿ ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷಣೆಯೊಂದಿಗೆ ‘ನೋಡಿ ನಾವು ಶಿವಮೊಗ್ಗದ ಜನ ಮಾಡೇ ಮಾಡ್ತಿವಿ ಮತದಾನ’ ‘ಮಲೆನಾಡ ಹೆಬ್ಗಾಗಿಲು ನಮ್ಮೂರು ಮತದಾನ ಮಾಡಲು ಮರೆಯದಿರು’ ‘ಮತದಾನ ನಿಮ್ಮ ಮಹಾಶಕ್ತಿ-ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ‘ಬಾರಿಸು ಕನ್ನಡ ಡಿಂಡಿಮವ, ಮರೆಯದೆ ಮಾಡೋಣ ಮತದಾನವ’ ಎಂಬಿತ್ಯಾದಿ ಘೋಷಣೆಗಳುಳ್ಳ ಪೋಸ್ಟರ್‍ಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ರವರು ಮ್ಯಾರಾಥಾನ್‍ನಲ್ಲಿ ಮೊದಲು ಬಂದ ಮೂರು ಅಭ್ಯರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಹಾಗೂ ಮೊದಲು ತಲುಪಿದ 47 ಜನರಿಗೆ ಪದಕವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿ ಪಂ ಸಿಪಿಓ ಗಾಯತ್ರಿ, ಯೋಜನಾ ನಿರ್ದೇಶಕ ರಂಗಸ್ವಾಮಿ, ಕೆಎಸ್‍ಆರ್‍ಪಿ ಕಮಾಂಡೆಂಟ್ ಯುವರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಂಜುನಾಥಸ್ವಾಮಿ, ಚುನಾವಣಾ ಐಕಾನ್ ಡಾ.ಶುಬ್ರತಾ, ಮಹಾನಗರಪಾಲಿಕೆ, ಜಿ.ಪಂ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.