ನಗರದ ಹೊಸ ಮನೆ ಬಡಾವಣೆಯ ವೀಣಾ ಶಾರದಾ ಶಾಲೆಯಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಇಂದು ಬೆಳಗ್ಗೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಂದಂತಹ ನಾಗರಿಕರಿಗೆ ಬಿಸ್ಕೆಟ್ ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ ,ಶ್ರೀರಾಮನಗರ ನಗರ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ವಿಜಯ , ವಿದ್ಯಾಶ್ರೀ, ಆಶಾ ಕಾರ್ಯಕರ್ತರಾದ ರೇಖಾ, ಹೇಮಾವತಿ ,ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ವಾರ್ಡ್ ಅಧ್ಯಕ್ಷ ಶರತ್ ಪ್ರಮುಖರಾದ ಎಲ್ ಶ್ರೀಧರ್, ನಾಗರಾಜ್, ಪವನ್ ,ಚೇತನ್ ರಾಹುಲ್ , ಶ್ರೀನಿವಾಸ್ ಇತರರು ಇದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ