ಶಿವಮೊಗ್ಗ ನಗರದ ಎನ್ ಟಿ ರಸ್ತೆಯ ಬೈಪಾಸ್ ನಲ್ಲಿರುವ ಗ್ಯಾರೇಜ್ ಒಂದರಲ್ಲಿ ಕಳ್ಳನೋರ್ವ ತನ್ನ ಕೈಚಳಕ ತೋರಿದ್ದು ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 30 ರ ಬೆಳಿಗ್ಗೆ 4ಗಂಟೆಯಲ್ಲಿ ಕಳ್ಳನೋರ್ವ ಗ್ಯಾರೇಜೊಂದರ ಮುಂಭಾಗದಲ್ಲಿದ್ದ ಸಿಸಿಟಿವಿಗಳನ್ನು ನಾಶಪಡಿಸಿ ಬೆಲೆಬಾಳುವ ಕಾರಿನ ಬ್ಯಾಟರಿ ಹಾಗೂ ಬಿಡಿಭಾಗಗಳನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ವೀಡಿಯೊದಲ್ಲಿ ಇರುವಂತೆ ಕಳ್ಳನು 2ಕ್ಯಾಮೆರಾಗಳನ್ನು ನಾಶಪಡಿಸಿ ನಂತರ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ಯಾರೇಜ್ ಮುಖ್ಯರಸ್ತೆಯಲ್ಲಿ ಇದ್ದರೂ ಕೂಡ ಕಳ್ಳತನ ನಡೆದಿರುವುದು ಎಲ್ಲರಲ್ಲಿ ಆತಂಕ ಉಂಟು ಮಾಡಿದೆ. ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ