ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರ ಗೃಹ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಹಾಗೂ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಾದ ಶ್ರೀ ಆರ್. ಮೋಹನ್ ಕುಮಾರ್, ಜಿ. ಹೆಚ್ ಸತ್ಯನಾರಾಯಣ, ಹನುಮ ನಾಯ್ಕ, ರಘುರಾಮ್ ದೇವಾಡಿಗ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ನಿಮ್ಮ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಉಳಿದ ನಿರ್ದೇಶಕರ ಸ್ಥಾನಕ್ಕೆ ಒಗ್ಗಟ್ಟಿನಿಂದ ಚುನಾವಣಾ ನಡೆಸಿ ಪರಸ್ಪರ ಒಮ್ಮತದಿಂದ ಒಂದು ತಂಡವಾಗಿ ಕಾರ್ಯ ನಿರ್ವಹಿಸಿ ತಮ್ಮ ಮಾರ್ಗ ದರ್ಶನದಂತೆ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗೆ ಹಾಗೂ ಯಾವುದೇ ಗುಂಪುಗಾರಿಕೆಯಿಲ್ಲದೇ ನ್ಯಾಯ ಸಮ್ಮತವಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಿಗೆ ಶುಭ ಹಾರೈಸಿ, ಉಳಿದ 28 ಕ್ಷೇತ್ರಗಳ ಗೆಲುವಿಗೆ ಒಗ್ಗಟ್ಟಿನಿಂದ ಒಂದು ತಂಡವಾಗಿ ಕಾರ್ಯ ನಿರ್ವಹಿಸಿ ಎಲ್ಲರನ್ನು ಗೆಲ್ಲಿಸುವ ಮೂಲಕ ತಂಡಕ್ಕೆ ಇನ್ನಷ್ಟು ಶಕ್ತಿ ತುಂಬುವಂತೆ ಶ್ರಮವಹಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್.ವೈ ರಮೇಶ್, ಚಿನ್ನಪ್ಪ, ಅಂತೋಣಿ ರಾಜು, ವಿ. ಲಕ್ಷ್ಮಣ, ಸಿ.ರವಿ, ರಾಮು, ಪಾಪಣ್ಣ, ಗಜಾನನ, ಕೃಷ್ಣಾ ರೆಡ್ಡಿ, ಅವಿನ್, ನರಸಿಂಹ ಮೂರ್ತಿ, ನಾಗರಾಜ್ ಇನ್ನಿತರರು ಹಾಜರಿದ್ದರು.