ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್ ಬಳಿ ಅಕ್ಟೋಬರ್ 9ರಂದು ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಮತಿ ಸ್ವಪ್ನಾ ಎಲ್. ಹಾಗೂ ಸಿಬ್ಬಂದಿಗಳಾದ ಶ್ರೀ ಸೂರ್ಯನಾಯ್ಕ, ಸಿಪಿಸಿ-1275 ಮತ್ತು ಶ್ರೀ ಮೊಹಮ್ಮದ್ ಫಾರೂಕ್, ಸಿಪಿಸಿ-1371 ಅವರು ವಿನೋಬನಗರ ಪೊಲೀಸ್ ಚೌಕಿ ರಸ್ತೆಯ ಕಡೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಅಪ್ರಾಪ್ತ ಬಾಲಕನೊಬ್ಬ KA-14-EU-***ನೋಂದಣಿ ಸಂಖ್ಯೆಯ TVS Jupiter ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದುದನ್ನು ಗಮನಿಸಿ, ತಡೆದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ, ಸದರಿ ಸ್ಕೂಟರ್‌ನ ನೋಂದಾಯಿತ ಮಾಲೀಕರಾದ ಆಲ್ಕೊಳ, ಕಟ್ಟೆ ಸುಬ್ಬಣ್ಣ ರಸ್ತೆ, ಶಿವಮೊಗ್ಗ ನಿವಾಸಿ ಶ್ರೀಮತಿ , ಕೋಂ , (ವಯಸ್ಸು 40 ವರ್ಷ) ಅವರು ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 199(ಎ), 146, 196, 190(2) ಹಾಗೂ ಕೇಂದ್ರ ಮೋಟಾರು ವಾಹನ ನಿಯಮಾವಳಿ 115ರ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಘನ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ವಾಹನದ ನೋಂದಾಯಿತ ಮಾಲೀಕರಿಗೆ ₹26,500/- ದಂಡ ವಿಧಿಸಿದೆ.

Leave a Reply

Your email address will not be published. Required fields are marked *