ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ದಸರಾ ದಲ್ಲಿ ಇಂದು ಆಹಾರ ದಸರಾ ಅಂಗವಾಗಿ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆಯರಿಗೆ ಬಾಳೆಹಣ್ಣು ಮತ್ತು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆ ನಡೆಯಿತು.

ಮೊದಲು ಸಂಚಾರಿ ಪೊಲೀಸರಿಗೆ ಈ ಸ್ಪರ್ಧೆ ನಡೆಯಿತು ಅದರಲ್ಲಿ ಸಂಚಾರಿ ಪೊಲೀಸ್ ಹೆಚ್ ಸಿ ಪ್ರವೀಣ್ ಪಾಟೀಲ್ ಎರಡು ನಿಮಿಷಕ್ಕೆ 12 ಇಡ್ಲಿ ತಿಂದು ಮೊದಲ ಬಹುಮಾನ ಪಡೆದರೆ ರಮೇಶ್ ಹೆಚ್ ಸಿ ಹತ್ತು ಇಡ್ಲಿ ತಿಂದು ಎರಡನೇ ಬಹುಮಾನ ಮತ್ತು ಸಂತೋಷ್ ಮೂರನೇ ಬಹುಮಾನ ಪಡೆದರು. ಮಹಿಳಾ ವಿಭಾಗದಲ್ಲಿ ಿ ದಿವ್ಯಏಳುವರೆ ಬಾಳೆಹಣ್ಣು ತಿಂದು ಮೊದಲ ಸ್ಥಾನ ಎಚ್ಸಿ ರಾದ ಏಳು ಬಾಳೆಹಣ್ಣು ದ್ವಿತೀಯ ಸ್ಥಾನ ಸಲೀಮಾ ಐದು ಬಾಳೆಹಣ್ಣು ತಿಂದು ತೃತೀಯ ಸ್ಥಾನ ಪಡೆದರು.
ಸಾರ್ವಜನಿಕರ ಸ್ಪರ್ಧೆಯಲ್ಲಿ ಧನಲಕ್ಷ್ಮಿ 13 ಬಾಳೆಹಣ್ಣು ಪ್ರಥಮಗೀತಾ 9 ಬಾಳೆಹಣ್ಣು ದ್ವಿತೀಯ ನೀಲಕುಮಾರಿ 8 ಬಾಳೆಹಣ್ಣು ತಿಂದು ತೃತೀಯ ಸ್ಥಾನ ಪಡೆದರು
ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಿಥುನ್ 11 ಮುಕ್ಕಾಲು ಇಡ್ಲಿ ತಿಂದು ಮೊದಲ ಸ್ಥಾನ ಮಣಿಕಂಠ 11 ಇಡ್ಲಿ ತಿಂದು ಎರಡನೇ ಸ್ಥಾನ ಪ್ರವೀಣ್ 9 ಇಡ್ಲಿ ತಿಂದು ಮೂರನೇ ಸ್ಥಾನ ಪಡೆದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟ್ರಾಫಿಕ್ ನಿರೀಕ್ಷಕರಾದ ದೇವರಾಜ್ ಶಿವಮೊಗ್ಗದಲ್ಲಿ ಮೈಸೂರು ಬಿಟ್ಟರೆ ಅತ್ಯಂತ ವಿಜ್ರಂಭಣೆಯಿಂದ ಶಿವಮೊಗ್ಗದಲ್ಲಿ ದಸರಾ ನಡೆಯುತ್ತಿದೆ ಸಂಚಾರಿ ಪೊಲೀಸರಿಗೂ ಆಹಾರ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾರೆ ಭಾರತೀಯರು ಆಹಾರಪ್ರಿಯರು ಪ್ರತಿದಿನ ಅವಸರದಲ್ಲಿ ಕೆಲಸ ಮಾಡುವ ನಮಗೆ ದಸರಾದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸಂತೋಷದೊಂದಿದೆ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಪ್ರೋತ್ಸಾಹ ಈ ಹಬ್ಬದಲ್ಲಿ ದೊರೆಯುತ್ತಿದೆ ಶಿವಮೊಗ್ಗ ದಸರಾ ರಾಜ್ಯದಲ್ಲೇ ಹೆಸರುವಾಸಿಯಾಗಿದೆ ಎಂದರು.
ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ ಮಾತನಾಡಿ ಸೋತವರು ಗೆದ್ದವರು ಎಲ್ಲರೂ ಸಂಭ್ರಮದಿಂದ ಖುಷಿಯಾಗಿದ್ದಾರೆ ಭಾರತ ವೈವಿಧ್ಯಮಯ ಆಹಾರ ಪದ್ಧತಿ ಇರುವ ದೇಶವಾಗಿದೆ. ಜಾತಿ ಮತ ಪಂಥ ಮರೆತು ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದ್ದು ದಸರಾ ಹಬ್ಬ ಎಲ್ಲರಿಗೂ ಸಂತೋಷ ತರಲಿ ಎಂದರು.
ಕಾರ್ಯಕ್ರಮದಲ್ಲಿ ಪಾಲಿಗೆ ಸಹಾಯಕ ಅಭಿಯಂತರ ಪ್ರಭಾಕರ್ ಮಾಜಿ ಕಾರ್ಪೊರೇಟರ್ ರೇಖಾ ರಂಗನಾಥ್ ಹಿರಿಯ ಆಹಾರ ನಿರೀಕ್ಷಕರಾದ ವಸಂತ್ ಕುಮಾರ್ ಆಹಾರ ಪರೀಕ್ಷಕರಾದ ಬಸವರಾಜ್ ಆರೋಗ್ಯ ಇಲಾಖೆಯ ಡಾಕ್ಟರ್ ಅನನ್ಯ ಆಹಾರ ದಶರಾದ ಕಾರ್ಯದರ್ಶಿ ಕೃಷ್ಣಮೂರ್ತಿ.ಶೈಲಜಾ ಮಂಜಣ್ಣ ಮತ್ತಿತರರಿದ್ದರು.