ಪಬ್ಲಿಕ್ ಟಿವಿಯ ವರದಿಗಾರ ಶಶಿಧರ್ ರವರು ನಿಷ್ಪಕ್ಷಪಾತ ವರದಿಯ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಅತ್ಯಂತ ಸೃಜನಶೀಲ ಮಾಧ್ಯಮ ಮಿತ್ರರಾಗಿ ಗುರುತಿಸಿಕೊಂಡಿದು ನಮ್ಮೊಂದಿಗೆ ಆತ್ಮೀಯ ಸಂಬಂಧ ಉಳಿಸಿಕೊಂಡಿದ್ದರು, ಅವರ ಸಾವು ದೃಶ್ಯ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಅಗಲಿಕೆಯ ನೋವನ್ನು ಬರಿಸುವ ಶಕ್ತಿ ಭಗವಂತ ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಅಂತೆಯೇ ಶಶಿಧರ್ ರವರ ಸಾವಿನ ನೋವಿನಲ್ಲಿರುವಾಗಲೇ ಇನ್ನೊಬ್ಬ ಸಮಾಜಮುಖಿ ಪತ್ರಿಕಾ ಮಿತ್ರರಾಗಿ ಸಾಮಾಜಿಕ ಕಳಕಳಿ ಬದ್ಧತೆಯೊಂದಿಗೆ ಪರಿಸರ ಪ್ರೇಮಿಯಾಗಿ ಸದಾ ಸಮಾಜಿಕ ನ್ಯಾಯಗಳ ಪರ ಧ್ವನಿ ಗೂಡಿಸುತ ಪ್ರಗತಿಪರ ಚಿಂತನೆಯೊಂದಿಗೆ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸುತ್ತ ಮಾಧ್ಯಮ ಲೋಕಕ್ಕೆ ನಂದಾದೀಪವಾಗಿ ಬೆಳಗಿದ ನಂದನ್ ರವರ ನಿಧನ ಊಹಿಸಲಾಸಾಧ್ಯ ಅವರ ನಿಧನದ ವಾರ್ತೆ ತೀವ್ರ ನೋಟು ಮಾಡಿದ್ದು ,ಅವರ ಕುಟುಂಬಕ್ಕೆ ಅಗಲಿಕೆ ನೋವನ್ನು ಬರೆಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.