ಮಂಜುನಾಥ ಶೆಟ್ಟಿ…
ಶ್ರೀ ಅಲೋಕ್ ಕುಮಾರ್ ಐಪಿಎಸ್, ಮಾನ್ಯ ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಕರ್ನಾಟಕ ರಾಜ್ಯ ರವರು, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ್ದು, ಮಾನ್ಯರಿಗೆ ಪೊಲೀಸ್ ಗೌರವ ವಂದನೆಗಳನ್ನು ಸಲ್ಲಿಸಲಾಯಿತು.
ನಂತರ ಶ್ರೀ ಸಂತೋಷ್ ಎಂ ಎಸ್, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಕಾರ್ಯದರ್ಶಿಗಳು, ಶ್ರೀಮತಿ ದಿವ್ಯಶ್ರೀ, ಡಿಐಜಿ ಕಾರಾಗೃಹ ಉತ್ತರ ವಲಯ ಬೆಂಗಳೂರು, ಶ್ರೀ ಶಿವ ಪ್ರಕಾಶ್ ಕೆ ಆರ್, KSISF ಕಮಾಂಡೆಂಟ್, ಜೈಲ್ ಸೂಪರಿಂಟೆಂಡೆಂಟ್ ಗಳಾದ ಡಾ|| ಪಿ ರಂಗನಾಥ್, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ, ಶಿವಮೊಗ್ಗ, ಶ್ರೀಮತಿ ಭವ್ಯ ಪಿ. ಸಹಾಯಕ ಅಧೀಕ್ಷಕರು, ಮಹಿಳಾ ಕಾರಾಗೃಹ, ಶಿವಮೊಗ್ಗ ಹಾಗೂ ಶ್ರೀ ಕಾರ್ಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶ್ರೀ ರಮೇಶ್ ಕುಮಾರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರೊಂದಿಗೆ ಸಭೆಯನ್ನು ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.