ಮಂಜುನಾಥ್ ಶೆಟ್ಟಿ…

ಆನ್ ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಔಷಧಿ ವ್ಯಾಪಾರಿಗಳ ಸಮಸ್ಯೆಗಳು ಬಗೆಹರಿಸುವಂತೆ ಒತ್ತಾಯಿಸಿ ಮೇ 20ರಂದು 24 ಗಂಟೆಗಳ ಕಾಲ ಔಷಧಿ ಅಂಗಡಿಗಳನ್ನು ಮುಚ್ಚಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲೆ ಔಷದ ವ್ಯಾಪಾರಿ ಸಂಘದ ಅಧ್ಯಕ್ಷ ಎಸ್ ಪಿ ಮಧುಕರ್ ಶೆಟ್ಟಿ ಹೇಳಿದರು.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇಶ ವ್ಯಾಪ್ತಿಯಾಗಿದೆ. ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆ ಮತ್ತು ರಾಜ್ಯ ಘಟಕದ ಸಹಭಾಗಿತ್ವದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮೇ 20 ರಿಂದ 24 ಗಂಟೆಗಳ ಕಾಲ ಮುಷ್ಕರ ಮುಂದುವರೆಯುತ್ತದೆ ಎಂದರು.


ಆನ್ ಲೈನ್ ಔಷಧ ಮಾರಾಟವನ್ನು ನಮ್ಮ ಸಂಘವು ತೀವ್ರವಾಗಿ ವಿರೋಧಿಸುತ್ತದೆ. ಔಷಧಿಗಳು ಸಾಮಾನ್ಯ ವಾಣಿಜ್ಯ ವಸ್ತುಗಳಲ್ಲ. ಅವುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಜವಾಬ್ದಾರಿಯಂತೆ ವಿತರಣೆ ಅಗತ್ಯ ಇದೆ. ಆದರೆ ಆನ್ ಲೈನ್ ನಲ್ಲಿ ಇದು ಸಾಧ್ಯವಾಗುವುದಿಲ್ಲ ಔಷಧಿಗಳು ದುರುಪಯೋಗವಾಗುತ್ತದೆ ಎಂದರು.

ಎ ಐ ಬಳಸಿ ನಕಲಿ ಪ್ರಿಸ್ಕ್ರಿಪ್ಷನ್ ಗಳನ್ನು ಬಳಸಬಹುದಾಗಿದೆ. ಅಲ್ಲದೆ ಅಸುರಕ್ಷಿತ ಔಷಧಿಗಳ ಬಳಕೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಆನ್ ಲೈನ್ ಔಷಧ ಮಾರಾಟ ರದ್ದಾಗ ಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಔಷಧಿ ವ್ಯಾಪಾರ ಸಂಘದ ಕಾರ್ಯದರ್ಶಿ ವೆಂಕಟೇಶ್ ಮಂಜುನಾಥ್ ವಿವೇಕಾನಂದ ನಾಯಕ ಶಂಕರ್ ಮಹಮ್ಮದ್ ಕೈಮ ರಮೇಶ್ ಪ್ರಕಾಶ್ ಉಮೇಶ್ ಸತೀಶ್ ಅನಿಲ್ ಭವಾನಿ ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *