ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಎನ್ಇಎಸ್ ಐಎಎಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪುರುಷರ ಚೆಸ್ ಪಂದ್ಯಾವಳಿಯಲ್ಲಿ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಾದ ಚಟ್ಟಣ್ ಬಹದ್ದೂರ್ (ತೃತೀಯ ಬಿ.ಸಿ.ಎ.), ಚಂದನ್ ಹೆಚ್.ಎಸ್. (ದ್ವಿತೀಯ ಬಿ.ಎಸ್ಸಿ.), ಬಸವರಾಜ್ ಎ.ವಿ. (ದ್ವಿತೀಯ ಬಿ.ಎಸ್ಸಿ.) ಹಾಗೂ ಸ್ಕಂದ ಎಂ. ರಾಯ್ಕರ್ (ದ್ವಿತೀಯ ಬಿ.ಸಿ.ಎ.) ಅವರ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ‌.

Leave a Reply

Your email address will not be published. Required fields are marked *