ಮಂಜುನಾಥ್ ಶೆಟ್ಟಿ…
ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಅರಣ್ಯ ಇಲಾಖೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.ಶಿವಮೊಗ್ಗ ಅಂಬಾರಿ ಹೊತ್ತ ಸೋಮಣ್ಣ ಆನೆಯಿಂದ ಅನಾಹುತಗಳಿಗೆ ನಾವೆ ಜವಾಬ್ದಾರರು ಎಂದು ಶಾಸಕರು ಹೇಳುತ್ತಿದ್ದು ತಪ್ಪಿತಸ್ಥ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಜಾಣ ನಡೆಗೆ ಶಾಸಕರು ಮುಂದಾಗಿದ್ದಾರೆ ಎಂಬ ಹೇಳಿಕೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದರು.
ಸಾಲು ಸಾಲಾಗಿ ಅರಣ್ಯ ಇಲಾಖೆಯ ವೈಫಲ್ಯಗಳು ಎದ್ದು ಕಾಣುತ್ತಿದ್ದರು ಅಧಿಕಾರಿಗಳನ್ನು ಅಮಾನತುಗೊಳಿಸುವಂತಹ ಕೆಲಸವನ್ನು ಮಾಡುವುದನ್ನು ಬಿಟ್ಟು ಶಾಸಕರು ಅವರ ಪರವಾಗಿ ನಿಂತಿರುವಂತೆ ವರ್ತಿಸುತ್ತಿರುವುದು ಸರಿಯಲ್ಲ.ಅರಣ್ಯ ಇಲಾಖೆಯ ಸಮಿತಿಯು ತೆಗೆದುಕೊಂಡ ತೀರ್ಮಾನ ಈ ಎಲ್ಲಾ ರಂಪಾಟಕ್ಕೆ ಕಾರಣ.ಅದೇ ಸಮಿತಿಯು ಈ ಬಾರಿ ಅಂಬಾರಿಯನ್ನು ಆನೆಗಳ ಮೇಲೆ ಹೊರಿಸಲು ಸಾಧ್ಯವಿಲ್ಲವೆಂದು ತಿಳಿಸಿ ಅಂಬಾರಿ ಮಹಾನಗರ ಪಾಲಿಕೆಯ ವಾಹನದಲ್ಲಿ ತೆಗೆದುಕೊಂಡು ಹೋಗಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದಿದ್ದರೆ ಇಷ್ಟೆಲ್ಲಾ ಅವಗಡ ಆಗುತ್ತಿರಲಿಲ್ಲ ಎಂದರು.
ತಾಯಿ ಚಾಮುಂಡೇಶ್ವರಿಯ ವಿಗ್ರಹ ಬಗ್ನ ವಾಗಿರುವುದು ಅಂಬಾರಿ ನುಚ್ಚು ಗುಜ್ಜಾಗಿದ್ದರು ಸಹ ಏನು ಆಗಿಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿರುವ ಶಾಸಕರಿಗೆ ಆ ತಾಯಿ ಚಾಮುಂಡೇಶ್ವರಿಯಲ್ಲಿ ಜನರು ಇಟ್ಟಿರುವ ನಂಬಿಕೆಗೆ ಆಗಿರುವ ದೊಡ್ಡ ಆಘಾತ ಎಂದು ತಿಳಿದರು ತಿಳಿಯದಂತೆ ನಟನೆ ಮಾಡುತ್ತಿರುವುದು ಸರಿಯಲ್ಲ ಎಂದರು.ಅಷ್ಟೇ ಅಲ್ಲದೆ ನಿಶಾನೆಯನ್ನು ಹಿಂದಕ್ ಕಟ್ಟಿ ಅಂಬಾರಿ ಆನೆಯನ್ನು ಮುಂದೆ ತರಲು ಶಾಸಕರು ಮತ್ತು ಪಟಗಾರರ ವಿಡಿಯೋ ಚಿತ್ರಗಳು ಮಾಧ್ಯಮದಲ್ಲಿ ಬರುತ್ತಿರುವುದು ಜಗಜ್ಜಾಗಿರವಾಗಿದೆ.
ಮೊದಲು ಅರಣ್ಯ ಇಲಾಖೆಯ ಮುಖ್ಯಸ್ಥರನ್ನು ವಜಗೊಳಿಸಿ ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯನ್ನು ಮಾಡುವುದರ ಮೂಲಕ ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮವನ್ನು ಜರಗಿಸುವುದನ್ನು ಬಿಟ್ಟು ಯಾರಿಂದ ತಪ್ಪಾಗಿದೆಯೋ ಅವರನ್ನೇ ನೇಮಿಸಿ ಎಲ್ಲಾ ಪರಿಶೀಲನೆ ಮಾಡಿ ನಂತರ ವರದಿಯನ್ನು ಕೊಡಲಿಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ರಾಜ್ಯಾಧ್ಯಕ್ಷರ ರವಿಪ್ರಸಾದ್ ಎಂ ಪ್ರಶ್ನಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೇವಲ ಕಾವಾಡಿಗರು ಮತ್ತು ಮಾವುತರ ಮೇಲೆ ಮುಂದಿನ ದಿನದಲ್ಲಿ ದರ್ಪವನ್ನು ತೋರಿಸುವಂತೆ ಅಮಾನತುಗೊಳಿಸುವ ಕಣ್ಣು ವರಿಸುವ ತಂತ್ರವನ್ನು ಮಾಡಬಾರದು ಮತ್ತು ಆ ಅರಣ್ಯ ಇಲಾಖೆಯ ಸಮಿತಿಯಿಂದ ಯಾರು ಈ ಆನೆಯನ್ನು ಅಂಬಾರಿ ಹೊರಿಸಲಿಕ್ಕೆ ಎಂದು ಅಗ್ನಾಪತ್ರಕ್ಕೆ ಸಹಿ ಹಾಕಿದ್ದಾರೋ ಅಂಥವರನ್ನೇ ತತಕ್ಷಣದಲ್ಲಿ ಕೆಲಸದಿಂದ ವಜಾ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಜಿಲ್ಲಾಧ್ಯಕ್ಷ ಮಧುಸೂದನ್ ಎಸ್ಎಂ ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯ ವೈಫಲ್ಯಗಳು ಸಾಲು ಸಾಲಾಗಿದ್ದರೂ ಸಹ ರಾಜ್ಯ ಸರ್ಕಾರ ಶಿವಮೊಗ್ಗದ ಕಡೆ ತಿರುಗಿಯೂ ನೋಡುತ್ತಿಲ್ಲ ಮತ್ತು ಜಿಲ್ಲಾ ಉಸ್ತುವಾರಿಗಳಾದಂತಹ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸಹ ಪ್ರಕರಣಕ್ಕೆ ತೇಪೆ ಹಚ್ಚುವ ರೀತಿಯಲ್ಲಿ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ಬಾರಿ ಬಂದಂತಹ ಬಾಲಣ್ಣನ ಕಿವಿಯನ್ನು ಕತ್ತರಿಸುವಂತಹ ದೊಡ್ಡ ವಿಷಯವಾದರೂ ಸಹ ಅಧಿಕಾರಿಗಳ ನಿರ್ಲಕ್ಷವನ್ನ ಗಣನೆಗೆ ತೆಗೆದುಕೊಂಡಿರುವುದಿಲ್ಲ.ಶೌರ್ಯ ಆನೆ ಸಾವಿನ ಬೆನ್ನಲ್ಲೂ ಸಹ ಅಧಿಕಾರಿಗಳ ನಿರ್ಲಕ್ಷವಿದ್ದರೂ ಅದಕ್ಕೂ ಸಹ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕರು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಅಷ್ಟೇ ಅಲ್ಲದೆ 2 ಕಾರು ನುಚ್ಚುಗುಜ್ಜಾಗಿದ್ದು ಆ ವ್ಯಕ್ತಿಗಳಿಗೆ ಸೂಕ್ತ ಪರಿಹಾರದ ಭರವಸೆಯೂ ಸಹ ಕೊಟ್ಟಿಲ್ಲ ಒಂದು ಮನೆಯ ಮೇಲ್ಚಾವಣಿ ಮುರಿದಿದ್ದರೂ ಸಹ ಸರಿಪಡಿಸುವ ಮಾತಿಲ್ಲ.ಇಷ್ಟೆಲ್ಲಾ ಆದರೂ ಸಹ ಪ್ರಕರಣವನ್ನು ಅಧಿಕಾರಿ ವರ್ಗದಿಂದ ಬದಲಿಸಿ ಆನೆಯ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ.ಶಾಸಕರು ಈಗಾಗಿರುವ ದೇವಿಯ ಅಪಚಾರಕ್ಕೆ ಸರಿಯಾದ ಕ್ರಮವನ್ನು ಜರುಗಿಸಿ ಅಧಿಕಾರಿಗಳನ್ನು ಅಮಾನತು ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮಗೆ ರಾಜಕೀಯವಾಗಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆಯನ್ನು ನೀಡಿ ಮತ್ತು ಅಧಿಕಾರಿಗಳ ವಜಾ ಆಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವಲೆ , ಜಿಲ್ಲಾ ವಕ್ತಾರ ಭರತ್ ಎಸ್, ಜಿಲ್ಲಾ ಉಪಾಧ್ಯಕ್ಷ ಎಂ ನಯಾಜ್, ನೂರುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.