ಮಂಜುನಾಥ್ ಶೆಟ್ಟಿ..


ಗೋಪಾಲ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ ವತಿಯಿಂದ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಮಕ್ಕಳಿಗೆ ಎಕ್ಸಸೈಜ್ ನೋಟ್ ಬುಕ್ ಮತ್ತು ಜಾಮೆಟ್ರಿ ಬಾಕ್ಸ್ ಗಳನ್ನು ವಿತರಿಸಲಾಯಿತು.

ಚಂದನ ಪಾರ್ಕಿನಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮನೆ ಕೆಲಸ ಸೇರಿದಂತೆ ವಿವಿಧ ಶ್ರಮಿಕ ಕೆಲಸ ಮಾಡುವವರ 25 ಮಕ್ಕಳಿಗೆ ನೋಟ್ ಬುಕ್ ಮತ್ತು ಜಾಮೆಟ್ರಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕ ಹಾಗೂ ಪಾರ್ಕ್‌ನ ಉಪಾಧ್ಯಕ್ಷ ಜಿ.ಡಿ. ಮಂಜುನಾಥ್ ಅವರು, ಇಂತಹ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪೂರಕವಾಗಿರುತ್ತವೆ. ಇದು ಮಾನವೀಯತೆ ಸ್ಪರ್ಶದ ಕೆಲಸ. ಬಡ ಮಕ್ಕಳಿಗೆ ಪುಸ್ತಕಗಳನ್ನು ನೀಡುವುದರಿಂದ ಅವರಿಗೆ ಅನುಕೂಲವಾಗುತ್ತದೆ. ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವುದರಿಂದ ಅರ್ಥಪೂರ್ಣವಾಗಿದೆ ಎಂದರು.

ಪಾರ್ಕಿನ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಎಲ್. ಗುರುರಾಜ್ ಮಾತನಾಡಿ, ಪುಸ್ತಕಗಳು ಮನುಷ್ಯನ ವಿವೇಕವನ್ನು ಹೆಚ್ಚಿಸುತ್ತವೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ, ಶಿಕ್ಷಣಕ್ಕೆ ಆದ್ಯತೆ ಕೊಡಿ ಎಂದರು.

ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಆರ್. ರಾಜಶೇಖರ್ ಮಾತನಾಡಿ, ಇದೊಂದು ಸ್ಫೂರ್ತಿ ಕಾರ್ಯಕ್ರಮ. ಮುಂದಿನ ಭಾನುವಾರ ನಾವು ಸಹ ಈ ರೀತಿ ಮಕ್ಕಳಿಗೆ ಶೈಕ್ಷಣಿಕ ಸಲಕರಣೆಗಳನ್ನು ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಪಿ.ಹೆಚ್. ರಾಜೇಶ್ವರಿ, ನಿರ್ಮಲ, ಪಾರ್ಕಿನ ಪದಾಧಿಕಾರಿಗಳಾದ ಜಿ.ಎಸ್. ಶಿವಕುಮಾರ್, ಅಶೋಕ್, ಪ್ರಭಾಕರ್, ಜಿ. ಕೆಂಚಪ್ಪ, ಎ. ಹಾಲೇಶಪ್ಪ, ರವಿ, ರಂಗೇಗೌಡರು,ರೈಲ್ವೆ ಪ್ರಸಾದ್,ಮಾಲತೇಶ್, ಸುಬ್ರಮಣ್ಯ, ಶಾಂತಯ್ಯ,ನವಲಪ್ಪ,ವಿಜಯಕುಮಾರ್, ಚಂದ್ರಾನಾಯ್ಕ್, ಸ್ವರ್ಣಾ, ಬೋರೆಗೌಡರು, ಸೇರಿದಂತೆ. ಪ್ರಯೋಜನ ಪಡೆದ
ಮಕ್ಕಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *