ಮಂಜುನಾಥ್ ಶೆಟ್ಟಿ
ಶಿವಮೊಗ್ಗ : ಶ್ರೀ ಅಯ್ಯಪ್ಪ ಸ್ವಾಮಿಯ ಶಕ್ತಿ ಪೂಜೆ ಹಾಗೂ ಪವಿತ್ರ ಹದಿನೆಂಟು ಮೆಟ್ಟಿಲು ಪಡಿ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಶ್ರೀಮತಿ ರಾಜೇಶ್ವರಿ ಹಾಗೂ ಅವರ ಪತಿ ಶ್ರೀ ಬಾಬು ಡಿ. ಮುರುಗೇಶ್ ಅವರ ಮನೆಯಲ್ಲಿ, ಪುತ್ರ ಅನೂಪ್ ಅವರ ಉಪಸ್ಥಿತಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಶಕ್ತಿ ಪೂಜೆ ಹಾಗೂ ಪವಿತ್ರ ಹದಿನೆಂಟು ಮೆಟ್ಟಿಲು ಪಡಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ಮದಲ್ಲಿ ಪೂಜ್ಯ ಬಿ. ಪೂಸ್ವಾಮಿ ಗುರುಸ್ವಾಮಿ ಹಾಗೂ ಪಿ. ಹರೀಶ್ ಗುರುಸ್ವಾಮಿ ಅವರು ಭಾಗವಹಿಸಿದ್ದರು. ವಿಶೇಷವಾಗಿ ಪಿ. ಹರೀಶ್ ಗುರುಸ್ವಾಮಿ ಅವರು 45 ವರ್ಷಗಳಿಗೂ ಹೆಚ್ಚು ಕಾಲ ಶಬರಿಮಲೆ ಯಾತ್ರೆ ಕೈಗೊಂಡಿದ್ದು, ನೂರಾರು ಶಿಷ್ಯರನ್ನು ಶಬರಿಮಲೆಗೆ ಕರೆದೊಯ್ದು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಸಿರುವುದು ವಿಶೇಷವಾಗಿದೆ.
ಅವರ ಶಿಷ್ಯರಾದ ಶಿವಮೂರ್ತಿ ಸೇರಿದಂತೆ ಸಮಸ್ತ ಅಯ್ಯಪ್ಪ ಸ್ವಾಮಿಗಳು ಹಾಗೂ ಭಜನಾ ಮಂಡಳಿಯ ಪ್ರಮುಖರಾದ ಶ್ರೀ ಗಣೇಶ್ ಮತ್ತು ತಂಡದವರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯ ಪರವಶತೆಯನ್ನು ಹೆಚ್ಚಿಸಿದರು.
ಶಕ್ತಿ ಪೂಜೆ, ಪವಿತ್ರ ಹದಿನೆಂಟು ಮೆಟ್ಟಿಲು ಪಡಿ ಪೂಜೆ ಹಾಗೂ ಭಜನಾ ಕಾರ್ಯಕ್ರಮದ ಮೂಲಕ ಆತ್ಮತೃಪ್ತಿ ಮತ್ತು ಆಧ್ಯಾತ್ಮಿಕ ಆನಂದ ದೊರೆತಿದೆ ಎಂದು ಪಿ. ಹರೀಶ್ ಗುರುಸ್ವಾಮಿ ಸಂತಸ ವ್ಯಕ್ತಪಡಿಸಿದರು.



