Day: March 7, 2022

ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ…

ಶಿವಮೊಗ್ಗ : ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ವಿ. ಸತ್ಯನಾರಾಯಣ (ಸತೀಶ್), ಉಪಾಧ್ಯಕ್ಷರಾಗಿ ಭಾನುಪ್ರಕಾಶ್.ಎನ್. ಉಪಾಧ್ಯಕ್ಷರು, ಕಾರ್ಯದರ್ಶಿಯಾಗಿ ಧನಂಜಯ.ಹೆಚ್. ಹಾಗೂ ಖಜಾಂಚಿಯಾಗಿ ಯೋಗಿಶ್.ಪಿ.ಎಸ್. ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರ.ಆರ್. ಸಂಘಟನಾ ಕಾರ್ಯದರ್ಶಿ, ಮಾದ್ಯಮ ಪ್ರತಿನಿಧಿಯಾಗಿ ಮಾಲತೇಶ್.ಎನ್ ., ನಿರ್ದೇಶಕರುಗಳಾಗಿ…

ನೀರು ಬಳಕೆದಾರರ ಸಂಘದ ವಾರ್ಷಿಕ ಕಾರ್ಯಕ್ರಮದಲ್ಲಿ 60 ಸಂಘಗಳಿಗೆ ತಲಾ 1 ಲಕ್ಷ ವಿತರಣೆ…

ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಆವರಣದಲ್ಲಿ ಇಂದು ನಡೆದ ನೀರು ಬಳಕೆದಾರರ ಸಂಘದ ವಾರ್ಷಿಕ ಕಾರ್ಯಕ್ರಮದಲ್ಲಿ ಅನುದಾನದ ನಿರ್ವಹಣೆಗಾಗಿ ತಲಾ ಒಂದು ಲಕ್ಷದಂತೆ 60 ಸಂಘಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪವಿತ್ರ ರಾಮಯ್ಯ ರವರು ಸಂಘಗಳಿಗೆ ಕೊಟ್ಟಂತಹ ಅನುದಾನವನ್ನು ಸಂಘದ ಸಮಗ್ರ…

ನ್ಯಾಯಕ್ಕಾಗಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮುಂದಾದ ಬೀದಿ ಬದಿ ವ್ಯಾಪಾರಿಗಳು…

07/03/2022 ಸೋಮವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ ಎಸ್. ಯಡಿಯೂರಪ್ಪ ನವರ ಕ್ಷೇತ್ರದಲ್ಲಿ ಬೀದಿ ಬದಿ ವ್ಯಾಪಾರಿಗಳು ನ್ಯಾಯಕ್ಕಾಗಿ ಹಗಲು-ಇರುಳು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಪುರಸಭೆಯ ವ್ಯಾಪ್ತಿಯ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರ ಕಾಂಪೌಂಡ್…

ಹೊರಗುತ್ತಿಗೆ ನೀರು ಸರಬರಾಜು ನೌಕರರಿಂದ ಪಾಲಿಕೆ ಆಯುಕ್ತರಿಗೆ ಮನವಿ…

ಹೊರಗುತ್ತಿಗೆ ನೀರು ಸರಬರಾಜು ನೌಕರರಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರದ ಮಹತ್ವದ ಯೋಜನೆ 24/7 ನಿರಂತರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣ ವಿಭಾಗದಲ್ಲಿ 124 ನೌಕರರು ಸುಮಾರು 15-20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಮೂಲಭೂತ…

ಉಕ್ರೇನ್ ನಿಂದ ಭಾರತಕ್ಕೆ ವಾಪಾಸಾದ ವಿದ್ಯಾರ್ಥಿಗಳಿಗೆ ಸ್ವಾಗತಿಸಿದ ಬೇಳೂರು ಗೋಪಾಲಕೃಷ್ಣ…

ಸಾಗರ ನ್ಯೂಸ್… ಉಕ್ರೇನ್ ನಿಂದ ತಾಯ್ನಾಡಿಗೆ ಆಗಮಿಸಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮನಿಷಾ,ಶಿಲ್ಪ ರವರನ್ನು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಶಾಸಕರು,ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಆತ್ಮೀಯವಾಗಿ ಬರಮಾಡಿಕೊಂಡು ಶುಭಹಾರೈಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು ಹಾಗೂ…

ಸಿ.ಎಫ್.ಐ , ಇತರ ಸಂಘಟನೆಗಳು ರಾಜ್ಯವನ್ನು ತಾಲಿಬಾನ್ ಮಾಡಲು ಹೊರಟಿವೆ-ವಿ. ಎಚ್. ಪಿ ವಾಸುದೇವ ಆರೋಪ…

ಪಿಎಫ್ಐ, ಸಿಎಫ್ಐ, ಎಸ್ಡಿಪಿಐ ಮೊದಲಾದ ಸಂಘಟನೆಗಳು ರಾಜ್ಯವನ್ನು ತಾಲೀಬಾನ್ ಮಾಡಲು ಹೊರಟಿವೆ. ಯಾವುದಕ್ಕೂ ತಾಳ್ಮೆ ಇಲ್ಲದಂತೆ ಹಿಂದೂ ಕಾರ್ಯರ್ತರನ್ನು ಕೊಲೆ ಮಾಡುತ್ತಿರುವುದು ಖಂಡನೀಯ. ಹರ್ಷ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆಗುವಂತೆ ನೋಡಿಕೊಳ್ಳುವಂತೆ ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಜೆ.ಆರ್.…

ಸರ್ಕಾರದ ಈ ಬಾರಿಯ ಬಜೆಟ್ ಅತ್ಯಂತ ನಿರಾಶಾದಾಯಕ-ಹೆಚ್.ಎಸ್. ಸುಂದರೇಶ್…

ಶಿವಮೊಗ್ಗ: ಈ ಬಾರಿಯ ರಾಜ್ಯ ಸರ್ಕಾರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದ್ದು, ಬಡವರನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದರು. ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಬಜೆಟ್ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.…

ಜನ ಔಷಧಿ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ-ಡಾ. ಹೇಮಂತ…

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಜನೌಷಧಿ ಯೋಜನೆ ರಾಷ್ಟ್ರದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಪ್ರತಿವರ್ಷ ಮಾ. 7 ರಂದು ಜನೌಷಧಿ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಹಮ್ಮಿಕೊಂಡಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ…

ಬಿ.ಎಸ್.ಯಡಿಯೂರಪ್ಪ ಹುಟ್ಟು ಹಬ್ಬದ ಪ್ರಯುಕ್ತ ಥ್ರೋಬಾಲ್ ಪಂದ್ಯಾವಳಿ ಬಿ.ವೈ. ವಿಜಯೇಂದ್ರ ಚಾಲನೆ…

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಥ್ರೋಬಾಲ್ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ ಏರ್ಪಡಿಸಿದ್ದು, ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ದಿವಾಕರ್ ಶೆಟ್ಟಿ ,ಮಾಲತೇಶ್, ಬಳ್ಳೆಕೆರೆ…

ಪತ್ರಕರ್ತ ಜೇಸುದಾಸ್ ಥಾಮಸ್ ರವರ ತಾಯಿ ಜಯಮ್ಮ ನಿಧನ…

ಶಿವಮೊಗ್ಗ: ಪತ್ರಕರ್ತರಾದ ಜೇಸುದಾಸ್, ಥಾಮಸ್ ಪಿ. ಅವರ ತಾಯಿ ಜಯಮ್ಮ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಮೂವರು ಪುತ್ರರು ಮತ್ತು ಮೂವರು…