2021 ರ ಜೂನ್ 18 ರಂದು ದೇಶಾದ್ಯಂತ ಭಾರತೀಯ ವೈದ್ಯ ಸಂಘ ಈ ದಿನವನ್ನು ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿದೆ .ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಲು ಕೋರಿ ಪ್ರಧಾನ ಮಂತ್ರಿಗಳು ಗಮನ ಸೆಳೆಯಲು ಮತ್ತು ಅನಕೂಲಕರ ಕ್ರಮವನ್ನು ಪಡೆಯಲು ಆಧುನಿಕ ವೈದ್ಯ ಪದ್ಧತಿಯನ್ನು ಅನುಸರಿಸುತ್ತಿರುವ ಎಲ್ಲ ವೈದ್ಯರು ಈ ಮುಷ್ಕರಕ್ಕೆ ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ .ಇಂದು ಐ. ಎಂ. ಎ . ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಶಿವಮೊಗ್ಗ ಶಾಖೆಯ ಪದಾಧಿಕಾರಿಗಳು ಮತ್ತು ಕಿರಿಯ ವೈದ್ಯರ ಸಂಘ ಇದರ ಪದಾಧಿಕಾರಿಗಳು ಪಾಲ್ಗೊಂಡಿದ್ದರು . ಈ ಸಂದರ್ಭದಲ್ಲಿ ಡಾ॥ ಪರಮೇಶ್ವರ ಶಿಗ್ಗಾಂವ್ ಅಧ್ಯಕ್ಷರು , ಗೌರವ ಕಾರ್ಯದರ್ಶಿ ಡಾ॥ಶಂಭುಲಿಂಗ ಬಂಕೊಳ್ಳಿ , ಡಾ॥ ಕೆ .ಬಿ .ಶೇಖರ್ ಅಧ್ಯಕ್ಷರು , ಡಾ॥ ರಾಹುಲ್ ನವೀನ್ ಉಪಾಧ್ಯಕ್ಷರು ಉಪಸ್ಥಿತರಿದ್ದರು
ವರದಿ ಮಂಜುನಾಥ ಶೆಟ್ಟಿ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153