ರಾಮನಗರ ನ್ಯೂಸ್…

ಶ್ರೀ ಕ್ಷೇತ್ರ ಶ್ರೀ ದೇಗುಲಮಠವು ಸುಮಾರು 660 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಶ್ರೀಮಠವು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ದಾಸೋಹ, ಶಿಕ್ಷಣ ಮತ್ತು ವಸತಿ ವ್ಯವಸ್ಥೆಯನ್ನು ಅನೇಕ ದಶಕಗಳಿಂದ ಕಲ್ಪಿಸಿಕೊಂಡು ಬರುತ್ತಿದೆ.

ಶ್ರೀ ದೇಗುಲಮಠದಲ್ಲಿ 1ನೇ ತರಗತಿಯಿಂದ 10 ನೇ ತರಗತಿಯವರೆಗೆ ಬಡ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಉಚಿತವಾಗಿ ಊಟ, ವಸತಿ, ಶಿಕ್ಷಣಗಳನ್ನು ನೀಡುತ್ತಿದೆ.

ಸಂಪ್ರದಾಯದಂತೆ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆ ಹಾಗೂ ವಿದ್ಯಾರ್ಥಿನಿಲಯಕ್ಕೆ ಉಚಿತ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಕನ್ನಡ ಮಾಧ್ಯಮ: 9538469196
ಇಂಗ್ಲೀಷ್ ಮಾಧ್ಯಮ: 7204648369

ವರದಿ ಮಂಜುನಾಥ ಶೆಟ್ಟಿ…