ಮಾಜಿ ಮುಖ್ಯಮಂತ್ರಿಗಳು ಹಾಗು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ,ಭದ್ರತಾ ವೈಫಲ್ಯ ಹಾಗು ಬಿಜೆಪಿಯ ಕೃತ್ಯವನ್ನು ಖಂಡಿಸಿ , ಸಿದ್ದರಾಮಯ್ಯ ರವರು ಮಡಿಕೇರಿ ಚಲೋ ಪ್ರತಿಭಟನೆಗೆ ಕರೆಕೊಟ್ಟಿದ್ದು , ರಾಜ್ಯಾಧ್ಯಂತ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಹಾಗು ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸವೊಂದು ಹೊರತುಪಡಿಸಿ ,ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿರುವ ಆಡಳಿತ ಪಕ್ಷಕ್ಕೆ ಉತ್ತರ ಕೊಡಬೇಕಿದೆ.ಹಾಗೆಯೇ ಕಾಂಗ್ರೆಸ್ಸಿನ ಕಾರ್ಯಕರ್ತರು ಮನಸ್ಸು ಮಾಡಿದಲ್ಲಿ , ಮೊಟ್ಟೆ ಹೊಡೆಯುವುದೇನು ಕಷ್ಟದ ವಿಚಾರವಲ್ಲ , ಒಬ್ಬೊಬ್ಬ ಬಿಜೆಪಿ ನಾಯಕನು ಮನೆಯಿಂದ ಹೊರಬರಲಾರ.ಇದನ್ನು ಅರಿತು ಬಿಜೆಪಿ ಎಚ್ಚೆತ್ತುಕೊಂಡು ಸಮರಸ್ಯತೆ ಕಾಪಾಡಿಕೊಳ್ಳುವುದರ ಜೊತೆಗೆ , ಗೌರವವನ್ನು ಕೊಟ್ಟು ತೆಗೆದುಕೊಳ್ಳುವುದನ್ನು ಕಲಿಯಬೇಕಿದೆ.

ಸಿದ್ದರಾಮಯ್ಯನವರ ಕರೆಗೆ ಓಗೊಟ್ಟು ಶಿವಮೊಗ್ಗ ಜಿಲ್ಲೆಯಿಂದ ಕೂಡ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು , ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಸ್ಟ್ 26 ರಂದು ,ಬೆಳಿಗ್ಗೆ 10 30 ಕ್ಕೆ ಎಫ್ ಎಂ ಸಿ ಕಾಲೇಜು ಹತ್ತಿರ , ಭಗವತಿ ನಗರ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರು ಮನವಿ ಮಾಡಿದ್ದಾರೆ.