ಒಂದು ತಿಂಗಳಿನಲ್ಲಿ ದೆಹಲಿ ವಿಮಾನಯಾನ ಸಚಿವಾಲಯದಿಂದ ‘ ಮಲ್ಟಿ ಡಿಸಿಪ್ಲಿನರಿ ತಂಡವು’ ಶಿವಮೊಗ್ಗದ ಸೊಗನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕೊನೆಯ ಹಂತದ ವೀಕ್ಷಣೆಗೆ ಆಗಮಿಸುತ್ತಿದ್ದು ದೆಹಲಿ ವಿಮಾನಯಾನ ಸಚಿವಾಲಯದಿಂದ ಹೆಚ್ಚುವರಿ ಕಾರ್ಯದರ್ಶಿಯಾದ ಶ್ರೀಮತಿ ಉಷಾ ಪದಿ ಅವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ವಿಮಾನ ನಿಲ್ದಾಣದ ಕಾಮಗಾರಿಯನ್ನು ವೀಕ್ಷಿಸಿ, ವಿವಿಧ ಏರ್ ಲೈನ್ ಸಂಸ್ಥೆಗಳೊಂದಿಗೆ ವರ್ಚವಲ್ ಸಭೆಯಲ್ಲಿ ಅಧಿಕಾರಿಕಾರಿಗಳೊಂದಿಗೆ ಭಾಗವಹಿಸಿದರು.

ಈ ಸಂದರ್ಭದಲ್ಲಿ ಐಎಸ್, ಎಸಿಎಸ್,ಐಡಿಡಿ ಅಧಿಕಾರಿಯಾದ ಗೌರವ್ ಗುಪ್ತ.
ಡಿಜಿಸಿಎ ಅಧಿಕಾರಿ ರಾಜೇಶ್, ಬಿಸಿಎಎಸ್ ಅಧಿಕಾರಿ ರೈ,
ಸ್ಟಾರ್ ಏರ್ ಸಂಸ್ಥೆಯ ವಿಕ್ರಂ ಚೌಹಾನ್, ಲೋಕೋಪಯೋಗಿ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಐಡಿಡಿ ಹೇಪ್ಶಿಬಾ ರಾಣಿ,ರೈಟ್ಸ್ ಎಜಿಎಂ ರಾಜು, ಚೀಫ್ ಇಂಜಿನಿಯರ್ ಕಾಂತರಾಜ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಪತ್, ಎಇಇ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…