ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಕೃಷ್ಣಮಠ ಪಾರ್ಕ್ ಹತ್ತಿರ ಪ್ರೊಫೆಸರ್ ಬಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟ ಆಗಿದೆ.

ಈ ಒಂದು ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ.ಮನೆಯ ಒಳಭಾಗ ಸಂಪೂರ್ಣ ಜಖಮ್ ಆಗಿರುತ್ತದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಹೊಡೆದು ಹೋಗಿದೆ.ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಅಗ್ನಿಶಾಮಕ ತುರ್ತು ಸೇವೆಗಳು ಹಾಗೂ ಸ್ಥಳೀಯ ಠಾಣಾಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.

ವರದಿ ಪ್ರಜಾ ಶಕ್ತಿ