ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್.

ಇದರ ಅಂಗವಾಗಿ ಇಂದು ಮಧ್ಯಾಹ್ನ  ನಗರದ ಶಿವಪ್ಪ ನಾಯಕ. ಪ್ರತಿಮೆ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ  ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು  ಸಂಭ್ರಮಿಸಿದರು.

ನೆನ್ನೆ ಕಾಂಗ್ರೆಸ್ ಪಕ್ಷದ ಸಮಿತಿಯು 39 ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಗೀತಾ ಶಿವರಾಜಕುಮಾರ್ ಹೆಸರು ಆಯ್ಕೆಯಾಗಿದೆ.

ಮಾಜಿ ಸಿಎಂ ಬಂಗಾರಪ್ಪನವರ ಸುಪುತ್ರಿ ಹಾಗೂ ಕರ್ನಾಟಕ  ಚಿತ್ರರಂಗದ ದಿಗ್ಗಜರಾದಂತಹ ರಾಜ್ ಕುಮಾರ್  ಕುಟುಂಬದ  ಸೊಸೆಯಾಗಿರುವಂತ ಗೀತಾ ಶಿವರಾಜಕುಮಾರ್.

ವಿಶೇಷವಾಗಿ “ರಾಗಿ ಕಿಸ” ಅನ್ನುವ ಸಿಹಿ ಯನ್ನು ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಹಂಚುವ ಮೂಲಕ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ನಗರದ ಕಾಂಗ್ರೆಸ್ ಕಾರ್ಯಕರ್ತರನ್ನು ಒಳಗೊಂಡಂತೆ ಮಾಜಿ ನಗರ ಪಾಲಿಕೆ ಸದಸ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.


ವರದಿ ಸಂತೋಷ ರಾಮ್