ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಶ್ರೀ ಮೋಹನ್ ಎಎಸ್ಐ, ಹಾಗೂ ಶ್ರೀ ಕಿರಣ್ ಸಿಪಿಸಿ ರವರು ಶಿವಮೊಗ್ಗ ನಗರದ ಎ ಎ ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿದಸ್ದಾಗ, ನಂದಿನಿ ಹಾಲಿನ ವಾಹನದ ಚಾಲಕನು ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದು, ಸದರಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ವಾಹನಕ್ಕೆ Defective Number plate ಅಳವಡಿಸಿರುತ್ತಾರೆ ಮತ್ತು ವಾಹನ ಚಾಲನಾ ಪರವಾನಿಗೆ ಇಲ್ಲದ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ಕಂಡು
ಬಂದಿರುತ್ತದೆ.
ನಂತರ ಶ್ರೀ ತಿರುಮಲೇಶ್, ಪಿಎಸ್ಐ, ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಶಿವಮೊಗ್ಗ ರವರು ಸದರಿ ನಂದಿನಿ ಹಾಲಿನ ವಾಹನದ ಮಾಲೀಕನಾದ ಧನುಷ್, 35 ವರ್ಷ, ಟಿಪ್ಪು ನಗರ ಶಿವಮೊಗ್ಗ ಈತನ ವಿರುದ್ಧ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಶಿವಮೊಗ್ಗದಲ್ಲಿ ಲಘು ಪ್ರಕರಣವನ್ನು
ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು, ದಿನಾಂಕಃ 22-06-2024 ರಂದು ಘನ 4ನೇ ಎಸಿಜೆ ಮತ್ತು ಜೆಎಂಎಫ್.ಸಿ ನ್ಯಾಯಾಲಯ ಶಿವಮೊಗ್ಗದ ಮಾನ್ಯ ನ್ಯಾಯಾಧೀಶರು ವಾಹನದ ಮಾಲೀಕನಾದ ಧನುಷ್ ನಿಗೆ ರೂ 25,500/- ದಂಡ ವಿಧಿಸಿರುತ್ತಾರೆ.