ನಗರದ ಸಾಗರ ರಸ್ತೆಯಲ್ಲಿರುವ ಪೊಲೀಸ್ ಲೇಔಟಿನ ಹತ್ತಿರ 4ಜನ ಪುಂಡರು 1ಆ್ಯಕ್ಟಿವಾ ಹಾಗೂ 1ಬಾಕ್ಸರ್ ಬೈಕಿನಲ್ಲಿ ದಾರಿಯಲ್ಲಿ ಹೋಗುತ್ತಿದ್ದವರಿಗೆ ಮಾರಣಾಂತಿಕ ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ ಕಸಿದು ಕೊಂಡಿರುವ ಘಟನೆ ವರದಿಯಾಗಿದೆ. ಸಂಜೆ ಸುಮಾರು 6:30 ಕ್ಕೆ 4ಜನ ಪುಂಡರು 2ಬೈಕಿನಲ್ಲಿ ದಾರಿಯಲ್ಲಿ ಹೋಗುತ್ತಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ ಗಳನ್ನು ದೋಚಿದ್ದಾರೆ. ಇದನ್ನು ತಡೆಯಲು ಬಂದ ಪೋಲಿಸ್ ಲೇಔಟಿನ ಸ್ಥಳೀಯರನ್ನು ಅವ್ಯಾಚ ಪದಗಳಿಂದ ನಿಂದಿಸಿ ಅವರ ಕಾರನ್ನು ಜಖಂಗೊಳಿಸಿದ್ದಾರೆ . ಅಲ್ಲದೆ ಪೊಲೀಸ್ ಲೇಔಟಿನ ಕೆಲವು ಮನೆಗಳಲ್ಲಿ ನುಗ್ಗಿ ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ನಾಲ್ವರ ಪೈಕಿ ಒಬ್ಬನನ್ನು ಸ್ಥಳೀಯರು ಹಿಡಿದಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಪೊಲೀಸ್ ಲೇಔಟಿನ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ