Day: July 30, 2022

ಮೈನ್ ಮಿಡ್ ಸ್ಕೂಲ್ ವಿದ್ಯಾರ್ಥಿಗಳಿಂದ ಮುಖ್ಯ ಶಿಕ್ಷಕರಿಗೆ ಬಿಳ್ಕೋಡಿಗೆ…

ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಮೈನ್ ಮಿಡ್ಲ್ ಸ್ಕೂಲ್ ಆವರಣದ ಶಾಲಾ ಸಭಾಂಗಣದಲ್ಲಿ, ಸರ್ಕಾರಿ ಕನ್ನಡ ಮತ್ತು ಅಂಗ್ಲ ಮಾಧ್ಯಮ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀ ಮತಿ ಶಾಂತಬಾಯಿ ರವರಿಗೆ, ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿ ಸಂಘದ…

ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುತ್ 2047 ಮಹೋತ್ಸವ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ…

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಇಂಧನ ಇಲಾಖೆ, ಹಾಗೂ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಶಿಕಾರಿಪುರ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ “ಉಜ್ವಲ ಭಾರತ, ಉಜ್ವಲ ಭವಿಷ್ಯ”ವಿದ್ಯುತ್ @ 2047 ಮಹೋತ್ಸವ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು.…

ಕಿರುಚಿತ್ರ ಮುಹೂರ್ತಕ್ಕೆ ಚಾಲನೆ ನೀಡಿದ ಉದ್ಯಮಿ ವಿನೋದ್…

ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಸಿದ್ದರಹಳ್ಳಿಯಲ್ಲಿ “ಬಿಡುಗಡೆ” ಕಿರುಚತ್ರದ ಚಿತ್ರಮುಹೂರ್ತವನ್ನು ಉದ್ಯಮಿ ವಿನೋದ್‌ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಲೆನಾಡು ಕಲೆಗೆ ಗೌರವ ಪ್ರಾಧಾನ್ಯತೆ ಕೊಟ್ಟ ತವರೂರು, ಅನೇಕ ಕಲಾ ಕೊಡುಗೆಯನ್ನು ನಾಡಿಗೆ ಕೊಟ್ಟಿದೆ, ಈ ನಿಟ್ಟಿನಲ್ಲಿ ಇಂದು…

ಸರ್ಕಾರದ ಯೋಜನೆಗಳು ಮಹಿಳೆಯರನ್ನು ತಲುಪಬೇಕು- ಎಂ.ಶಂಕರ್…

ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ ರೂಪಿಸಿರುವ ಯೋಜನೆಗಳು ಪ್ರತಿಯೋರ್ವ ಮಹಿಳಾ ಉದ್ಯಮಿಗೆ ತಲುಪುವಂತಾಗಬೇಕು ಎಂದು ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಯುತ ಎಂ. ಶಂಕರ್ ರವರು ನುಡಿದರು. ಅವರು ಸ್ವೇದ ಮಹಿಳಾ ಉದ್ಯಮಿಗಳ ಸಂಘ ನಗರದ ಮಥುರಾ ಪ್ಯಾರಡೈಸ್ ಎದುರಿನ ಪ್ರವಾಸಿ ಕಾರು…

ಭದ್ರಾಗೆ ಬಾಗಿನ ಅರ್ಪಿಸಿದ ಬಿ.ವೈ. ರಾಘವೇಂದ್ರ, ಅಶೋಕ ನಾಯ್ಕ…

ಜಲ ಸಂಪನ್ಮೂಲ ಇಲಾಖೆ, ಹಾಗೂ ಕರ್ನಾಟಕ ನೀರಾವರಿ ನಿಗಮ ಇಲಾಖೆಯ ಮೂಖಾಂತರ ಭದ್ರಾ ರಿವರ್ ಪ್ರಾಜೆಕ್ಟ್ ನಲ್ಲಿ ಭದ್ರಾ ನದಿಗೆ ಭಾಗಿನ ಸಮರ್ಪಿಸಲಾಯಿತು. ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ಸಂಸದರಾದ ಶ್ರೀ ಬಿ ವೈ ರಾಘವೇಂದ್ರರವರು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ…

ಶಿವಮೊಗ್ಗ ನಗರದ ಎಪಿಎಂಸಿ ಹಾಗೂ ರೇಷ್ಮೆ ಇಲಾಖೆ ಕಟ್ಟಡಗಳು ಕಾರ್ಯನಿರ್ವಹಿಸುತ್ತಿಲ್ಲ,ಕೆಲಸಗಳ ನಿರ್ವಹಣೆಗೆ ಹೆಚ್ಚು ಗಮನ ಕೊಡಿ-ಡಾ.ಕೆ.ಎಸ್. ನಾರಾಯಣಗೌಡ…

ಶಿವಮೊಗ್ಗ : ರೇಷ್ಮೆ ಇಲಾಖೆ ಸೇರಿದಂತೆ ಬಾಗಿಲು ಮುಚ್ಚಿರುವ ಸರ್ಕಾರಿ ಕಟ್ಟಡಗಳ ನಿರ್ವಹಣೆ ಹಾಗೂ ಅಲ್ಲಿನ ಸ್ವತ್ತುಗಳ ರಕ್ಷಣೆ ಬಗ್ಗೆ ಗಮನ ಹರಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಎಸ್. ನಾರಾಯಣ ಗೌಡ…

ದೇಹವೆಂಬ ಬಂಡಿಗೆ ವಿವೇಕ ಎಂಬ ಕಡಿಗೀಲು ಇದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ-ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ…

ಶಿವಮೊಗ್ಗ: ದೇಹವೆಂಬ ಬಂಡಿಗೆ ವಿವೇಕ ಎಂಬ ಕಡಿಗೀಲು ಇದ್ದಾಗ ಮಾತ್ರ ಅದು ಸರಿದಾರಿಯಲ್ಲಿ ಹೋಗುತ್ತದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು. ಶ್ರೀಗಳು ನಿನ್ನೆ ಶಂಕರಮಠ ರಸ್ತೆ ಶ್ರೀ ಓಂ ಗಣೇಶ್ ಟ್ರೈಲರ್ಸ್ ಆವರಣದಲ್ಲಿ ಶ್ರೀ ಮುರುಘ…

ಮತಾಂದ ಶಕ್ತಿಗಳನ್ನ ಬೆಳೆಸಿದ್ದು ಕಾಂಗ್ರೆಸ್, ಆ ಶಕ್ತಿಗಳನ್ನು ಮಟ್ಟ ಹಾಕುವುದೇ ಸರ್ಕಾರಕ್ಕೆ ಇರುವ ದೊಡ್ಡ ಸವಾಲು-ಗೃಹ ಸಚಿವ ಆರಗ ಜ್ಞಾನೇಂದ್ರ…

ಶಿವಮೊಗ್ಗ: ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್. ಆ ಶಕ್ತಿಗಳನ್ನು ಮಟ್ಟ ಹಾಕುವುದೇ ನಮ್ಮ ಸರ್ಕಾರಕ್ಕಿರುವ ದೊಡ್ಡ ಸವಾಲು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ ಯುವಕರ ಮೇಲೆ…

ಬಿಜೆಪಿ ಸರ್ಕಾರದಲ್ಲಿ ಹಿಂದುಗಳ ಹತ್ಯೆಯಾಗುತ್ತಿದೆ, ರಾಜಕಾರಣಿಗಳ ಮಕ್ಕಳು ಸುರಕ್ಷತವಾಗಿದ್ದರೆ-ಹೆಚ್.ಎಸ್. ಸುಂದರೇಶ್…

ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಬಡವರ ಮಕ್ಕಳೇ ಏಕೆ ಹತ್ಯೆಯಾಗುತ್ತಿದ್ದಾರೆ? ರಾಜಕಾರಣಿಗಳ ಮಕ್ಕಳು ಏಕೆ ಸುರಕ್ಷಿತರಾಗಿರುತ್ತಾರೆ ಎಂದು ಜನರೇ ಯೋಚಿಸಬೇಕಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು…

ಶಿವಮೊಗ್ಗದಲ್ಲಿ ತಂಬಾಕು ದಾಳಿ ,3300 ದಂಡ ಸಂಗ್ರಹ…

ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿ ಕೊಟ್ಪಾ ಕಾಯ್ದೆ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ದಾಳಿಗಳನ್ನು ಹಮ್ಮಿಕೊಳ್ಳಲಾಯಿತು.ಶಿವಮೊಗ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಇವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ದಾಳಿ ನಡೆಸಿ ಒಟ್ಟು 21 ಪ್ರಕರಣಗಳನ್ನು ದಾಖಲಿಸಿ, ರೂ.3300…