Day: July 14, 2022

ಗುರು ಪೂರ್ಣಿಮಾ ಪ್ರಯುಕ್ತ ಭಜನಾ ಕಾರ್ಯಕ್ರಮ…

ಗುರುಪೂರ್ಣಮಿ ಪ್ರಯುಕ್ತ ಶ್ರೀ ಶಾರದಾ ಸಂಗೀತ ವಿದ್ಯಾಲಯ ಶ್ರೀಧರ ಸೇವಾ ಸಮಿತಿ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ಬಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವಿಶೇಷತೆ ನಾಲ್ಕುವರೆ ವರ್ಷದ ಮಗುವಿನಿಂದ ಹಿಡಿದು ಸುಮಾರು ನೂರು ಜನ ಮಕ್ಕಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವರದಿ…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಮಾನ್ಸೂನ್ ರೈತ ವಾಹನ ಉತ್ಸವ 2022…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ “ ಮಾನ್ ಸೂನ್ ರೈತ ವಾಹನ ಉತ್ಸವ-2022 “ ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ ತಂದಿದ್ದು. ಸದರಿ ಯೋಜನೆಯಲ್ಲಿ ನಾಲ್ಕು ಚಕ್ರದ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ…

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಸಚಿವರಿಗೆ ಕರಾಟೆ ಪಂದ್ಯಾವಳಿಗೆ ಆಹ್ವಾನ…

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಇಂದು ಮಾನ್ಯ ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡ ರವರನ್ನು ದಕ್ಷಿಣ ಭಾರತದ ಬಹುದೊಡ್ಡ ಕರಾಟೆ ಪಂದ್ಯಾವಳಿಯಾದ ಶಿವಮೊಗ್ಗ ಓಪನ್ ಮೂರನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಗೆ ಉದ್ಘಾಟಕರಾಗಿ ಆಗಮಿಸಲು ಆಹ್ವಾನವನ್ನು ನೀಡಲಾಯಿತು. ಈ…

ಶಿವಮೊಗ್ಗ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಭೇಟಿ…

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಪರಿಹಾರ ಸೇರಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿಕೆಗಿಂತ ಭಾರೀ…

ಭದ್ರಾ ಜಲಾಶಯ 4 ಗೇಟುಗಳಿಂದ 15 ಸಾವಿರ ಕ್ಯುಸೆಕ ನೀರು ಹೊರ ಬರುತ್ತಿರುವ ಮನಮೋಹಕ ದೃಶ್ಯ…

ಶಿವಮೊಗ್ಗ: ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜುಲೈನಲ್ಲೇ ಭದ್ರಾ ಜಲಾಶಯ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಾಗಿದ್ದು, ಇದರ ಪರಿಣಾಮ…

ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಚಾಂಪಿಯನ್‌ಶಿಪ್…

ಶಿವಮೊಗ್ಗ : ನಗರದ ಜೆ‌.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಉತ್ತಾನ-2022 ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಚಾಂಪಿಯನ್‌ಶಿಪ್ ಲಭಿಸಿದೆ. ಬೆಸ್ಟ್ ಸಿಇಒ ಸ್ಫರ್ಧೆಯಲ್ಲಿ ಪ್ರಮೋದ್.ಎಂ.ಬಿ ಪ್ರಥಮ ಸ್ಥಾನ, ಫ್ಯಾಷನ್ ಶೋ ಸ್ಫರ್ಧೆಯಲ್ಲಿ ಲೇಖನ.ವಿ, ಸ್ವರ್ಣಚಂದ್ರ ನಾಯಕ್, ಙಾವನಾ.ಜೆ.ಪಿ,…

ಒಳ್ಳೆಯ ಗುರಿ ಮತ್ತು ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಂತ ಮಹತ್ವವಾದದ್ದು-ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ…

ಶಿವಮೊಗ್ಗ: ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಗುರುವಿನ ಅಗತ್ಯತೆ ಸಮಾಜಕ್ಕೆ ಇದ್ದು, ಒಳ್ಳೆಯ ಗುರಿ ಮತ್ತು ಉತ್ತಮ ಗುರುವಿನ ಮಾರ್ಗದರ್ಶನ ಹಾಗೂ ಮೌಲ್ಯಯುತ ಸಂಸ್ಕಾರ ಅವಶ್ಯ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಬೆಕ್ಕಿನ…

ಪೊಲೀಸ್ ಚೌಕಿಯಲ್ಲಿ ಹಂದಿ ಅಣ್ಣಿ ಭೀಕರ ಕೊಲೆ…

ಶಿವಮೊಗ್ಗ: ಕುಖ್ಯಾತ ರೌಡಿ, ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಂದಿ ಅಣ್ಣಿಯನ್ನು ಇಂದು ಬೆಳಗ್ಗೆ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.ವಿನೋಬನಗರದ ಪೊಲೀಸ್ ಚೌಕಿಯ ಬಳಿ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಬರ್ಬರ ಹತ್ಯೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಇನ್ನೋವಾ…