Day: August 8, 2022

ಶ್ರಾವಣ ಮಾಸದ ಕೊಡುಗೆ ರೈತರಿಂದ ಖರೀದಿಸುವ ಹಾಲಿನ ದರ ರೂ.1 ಹೆಚ್ಚಳ…

ಶ್ರಾವಣ ಮಾಸದ ಕೊಡುಗೆಯಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆ.ಜಿ ಗೆ ರೂ.1 ಹೆಚ್ಚಿಸಲಾಗುವುದು ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದರಾವ್ ತಿಳಿಸಿದರು. ಮಾಚೇನಹಳ್ಳಿ ಹಾಲಿನ ಡೇರಿಯಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ…

ಮಕ್ಕಳಲ್ಲಿ ಸೃಜನಶೀಲತೆ ಪ್ರೋತ್ಸಾಹಿಸಲು ಚಂದ್ರಶೇಖರಯ್ಯ ಪೋಷಕರಿಗೆ ಸಲಹೆ…

ಶಿವಮೊಗ್ಗ: ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರೀಯಾಶೀಲತೆ ಸುಪ್ತವಾಗಿದ್ದು, ಶಾಲಾ ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿನ ಕ್ರೀಯಾಶೀಲತೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ. ಚಂದ್ರಶೇಖರಯ್ಯ ಹೇಳಿದರು. ಅಜಾದಿ…

ಸ್ಮಾರ್ಟ್ ಸಿಟಿ ಯೋಜನೆ ಡಿವಿಎಸ್ ರಸ್ತೆ 2 ತಿಂಗಳಲ್ಲಿ ಹಾಳಾಗಿದ್ದು ತನಿಖೆ ನಡೆಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ ಆಗ್ರಹ…

ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಿಂದ ಅಭಿವೃದ್ಧಿಪಡಿಸಿದ ಡಿವಿಎಸ್ ಮತ್ತು ಕಾನ್ವೆಂಟ್ ರಸ್ತೆ ಕೇವಲ ಎರಡು ತಿಂಗಳಲ್ಲಿ ಸಂಪೂರ್ಣ ಹಾಳಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಇಂದು ನಗರದ ಡಿವಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ…

ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿ ಕುರಿತು ವಿಶೇಷ ಸಭೆ ಕರೆಯುವಂತೆ ಪಾಲಿಕೆ ಸದಸ್ಯರಿಂದ ಮೇಯರ್ ಗೆ ಮನವಿ…

ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರಧಿಯನ್ನು ಚರ್ಚಿಸುವ ಕುರಿತು ವಿಶೇಷ ಸಭೆಯನ್ನು ಆಯೋಜಿಸಬೇಕೆಂದು ಪಾಲಿಕೆ ಸದಸ್ಯರು ಮೇಯರ್ ಗೆ ಮನವಿ ಸಲ್ಲಿಸಿದರು. ದಿನಾಂಕ: 30-11-2020 ಸಾಮಾನ್ಯ ಸಭೆಯಲ್ಲಿ ಬ್ಯಾರಿಸ್ ಸಂಸ್ಥೆಯವರು 99 ವರ್ಷ ಶಿವಪ್ಪ ನಾಯಕ ಮಾಲ್…

ಹರ್ ಗರ್ ತಿರಂಗ ಬೈಕ್ ರ್ಯಾಲಿಗೆ ಚಾಲನೆ ಕೊಟ್ಟ ಬಿ.ವೈ.ರಾಘವೇಂದ್ರ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ ಭಾರತೀಯ ಜನತಾ ಪಕ್ಷ ನಗರ ಘಟಕ ವತಿಯಿಂದ ಎಂ. ಆರ್. ಎಸ್ ವೃತ್ತದಿಂದ ಪ್ರಾರಂಭವಾಗಿ – ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶಿವಮೂರ್ತಿ ವೃತ್ತದವರೆಗೆ ನೆಡೆದ ಹರ್ ಗರ್ ತಿರಂಗ ಬೈಕ್ ರ‌್ಯಾಲಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ…

ಟೈಲರ್ ಗಳ ಕ್ಷೇಮ ನಿಧಿ ಮಂಡಳಿ ರಚಿಸಿ-ಆಮ್ ಆದ್ಮಿ ಪಕ್ಷ ಆಗ್ರಹ…

ಶಿವಮೊಗ್ಗ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅವರ ಬೇಡಿಕೆಗಳನ್ನು ಈಡೇರಿಸುಲು ಅನುಕೂಲವಾಗುವಂತೆ ಸರ್ಕಾರ ಟೈಲರ್ಸ್ ಕ್ಷೇಮನಿಧಿ ಮಂಡಳಿ ರಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ಘಟಕ ಆಗ್ರಹಿಸಿದೆ. ಇಂದು ಮೀಡಿಯಾ ಹೌಸ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ…

ಬಿಜೆಪಿಗರೆ ಸರ್ಕಾರ ಬಿಟ್ಟು ತೊಲಗಿ ಘೋಷಣೆಯೊಂದಿಗೆ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ…

ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದೆ, ದೇಶದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಮಾಡಿದ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ “ಬಿಜೆಪಿಗರೇ ಸರಕಾರ ಬಿಟ್ಟು ತೊಲಗಿ” ಎಂಬ ಘೋಷಣೆಯೊಂದಿಗೆ – ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್…

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಸಂಪೂರ್ಣ ಕಳಪೆ ಇದನ್ನು ನ್ಯಾಯಾಂಗ ತನಿಖೆ ಒಪ್ಪಿಸಿ-ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಆಗ್ರಹ…

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಅವೈಜ್ಞಾನಿಕವಾಗಿದ್ದು, ಕೂಡಲೇ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಆಗ್ರಹಿಸಿದರು. ಅವರು ಇಂದು ಮೀಡಿಯಾ ಹೌಸ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್‍ಸಿಟಿ…