ಶಿವಮೊಗ್ಗ :ತಿ. ನಾ ಶ್ರೀನಿವಾಸ್ ಅವರು ‘ಜಿಲ್ಲೆಯ ಕಾಂಗ್ರೆಸ್ ನಾಯಕರು ರೈತರಪರ ಹೋರಾಟವನ್ನು ಮರೆತ ಕಾರಣ ಅರಣ್ಯ ಇಲಾಖೆ ಶೋಷಣೆಗೆ ಇಳಿದಿದೆ’ ಎಂದು ಟೀಕಿಸಿದ್ದಾರೆ, ಅವರು ನಿಜವನ್ನೆ ಹೇಳಿದ್ದಾರೆ ಅವರಿಗೆ ಈಗ ಪಶ್ಚಾತಾಪವಾಗಿದೆ, ಹಾಗಾಗಿ ಅವರು ನಮ್ಮ ಮನೆಯ ಮುಂದೆ ಹೋರಾಟ ಮಾಡುವ ಬದಲು ಕಾಂಗ್ರೆಸ್ ನಾಯಕರ ಮನೆಯ ಮುಂಭಾಗದಲ್ಲಿ ಸಂತಾಪದ ಪಾದಯಾತ್ರೆ ಮಾಡಿಕೊಳ್ಳಲಿ ಎಂದು ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಎರಡು ವಾರದಿಂದ ನಮ್ಮ ಮಲೆನಾಡು ಭಾಗದ ಸಮಸ್ಯೆಯಾದ ಬಗರ್ ಹುಕುಂ, ಅರಣ್ಯ ಹಕ್ಕು, ಮುಳುಗಡೆ ಸಂತ್ರಸ್ತರು ಈ ವಿಷಯದಲ್ಲಿ ಚರ್ಚೆಗಳು ಶುರುವಾಗಿದೆ, ನಮ್ಮ ಪಕ್ಷದ ಮುಖಂಡರು, ನಾಯಕರ ನೇತೃತ್ವದಲ್ಲಿ ಸ್ಪಂದನೆ ನೆಡಿಸುವ ಕೆಲಸಗಳು ಕೂಡ ನೆಡೆದಿದೆ.ಕಾಂಗ್ರೆಸ್ ಮುಂಖಂಡರಾದ ತಿ. ನಾ. ಶ್ರೀನಿವಾಸ್ ಒಂದು ಹೋರಾಟ ಸಮಿತಿ ಮಾಡಿಕೊಂಡು 7ನೇ ತಾರೀಕು ಶಿಕಾರಿಪುರದಲ್ಲಿ ಸಂಸದರ ಮನೆ ಮುತ್ತಿಗೆಯ ವಿಷಯವನ್ನು ಪತ್ರಿಕಾ ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ.

ಕೆಲವು ರೈತರು/ ಪರಿಸರವಾದಿಗಳು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ, ಇವತ್ತಿನ ನಮ್ಮ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಯಾವುದೇ ರೈತರನ್ನು ಒಕ್ಕಲೆಎಬ್ಬಿಸುವ ಪ್ರಶ್ನೆಯೇ ಇಲ್ಲ, ಜೊತೆಗೆ ನ್ಯಾಯಾಲಯವು ಈ ವಿಷಯದಲ್ಲಿ ಉಳಿದ ಅರ್ಜಿಯನ್ನು ವಿಲೇವಾರಿ ಮಾಡಲು ಸಮಯವನ್ನು ಹೆಚ್ಚು ನೆಡಬೇಕೆಂದು ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ.

ಒಬ್ಬ ಸಂಸತ್ ಸದಸ್ಯನಾಗಿ ನನ್ನ ಕರ್ತವ್ಯ ಪಾರ್ಲಿಮೆಂಟ್ ನಲ್ಲಿ ಈ ವಿಷಯವನ್ನು ತೆಗೆದುಕೊಂಡು ಚರ್ಚೆಯನ್ನು ಮಾಡಲಾಗಿದೆ, ಕೇಂದ್ರ ಸರ್ಕಾರಕ್ಕೆ ಈ ವಿಷಯದ ತೀವ್ರತೆಯನ್ನು ಜಿಲ್ಲೆಯ ಸಚಿವರು, ಶಾಸಕರು ಅರ್ಥಮಾಡಿಸಿ ಕೇಂದ್ರದ ಸಚಿವರಾದ ಅರ್ಜುನ್ ಮುಂಡ ಹಾಗೂ ಭೂಪೇಂದ್ರ ಯಾದವ್ ಅವರ ಗಮನಕ್ಕೆ ತಂದಿದ್ದೇವೆ.

ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕನ್ನು ಮಾನ್ಯ ಮಾಡುವ ಕಾರ್ಯಕ್ರಮದನ್ನು 2006ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು, ಇದರಲ್ಲಿ ಸ್ವಷ್ಟವಾಗಿ ತಿಳಿಸಿದ್ದಾರೆ ಎಸ್.ಟಿ ವರ್ಗದವರಿಗೆ 2005ರ ಹಿಂದಿನ 25 ವರ್ಷದ ದಾಖಲೆಯನ್ನು ಕೊಡಬೇಕು, ಇತರ ಪಾರಂಪರಿಕ ಅರಣ್ಯವಾಸಿಗಳು 3 ತಲೆಮಾರಿನ ದಾಖಲೆ ಅಂದರೆ 75 ವರ್ಷಗಳ ದಾಖಲೆಯನ್ನು ನೀಡಬೇಕು ಎಂದಿದೆ, ಇದನ್ನು ಕಾಂಗ್ರೆಸ್ ಸರ್ಕಾರವು ಅವರ ಅವಧಿಯಲ್ಲಿ ತಂದಿದ್ದು, 2007 ಮತ್ತು 2008ರ ಸಮಯದಲ್ಲಿ ತಿದ್ದುಪಡಿಯಾಗುತ್ತದೆ, ಅವರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಲು ಅವಕಾಶವಿತ್ತು ಆದರೆ ಆ ಸಮಯದಲ್ಲಿ ಇದ್ದ ಸಂಸದರು ಯಾವುದೇ ವಿಷಯವನ್ನು ಪ್ರಸ್ತಾಪ ಮಾಡದೇ
ಇಂದು ಈ ದುಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದ್ದಿದ್ದಾರೆ.

ಬಿಜೆಪಿ ಪಕ್ಷದ ಹೋರಾಟ : ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಇದ್ದ ಸಮಯದಲ್ಲಿ ರಾಜ್ಯದಲ್ಲಿ ಏಕೈಕ ಬಿಜೆಪಿಯ ಶಾಸಕರಾಗಿ ಸನ್ಮಾನ್ಯ ಬಿ. ಎಸ್ ಯಡಿಯೂರಪ್ಪನವರು ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಹೊರಾಟದ ಸದನದ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದು ನಮ್ಮ ಪಕ್ಷದದವರು.
ಶಿಕಾರಿಪುರದ ಗಾಂಧಿನಗರದ ಸಾಗುವಳಿದಾರರು ಸೊರಬಕ್ಕೆ ತೆರಳಿ ಲೋಕಸಭಾ ಸದಸ್ಯರಿಗೆ ಈ ವಿಷಯವನ್ನು ತೆಗೆದುಕೊಂಡು ಹೋದಾಗ ” ಇದು ಸುಪ್ರೀಂಕೋರ್ಟ್ ನಲ್ಲಿದೆ ನಾವು ಜನಪ್ರತಿನಿಧಿಗಳು ಏನು ಮಾಡಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು ” ಆದರೆ ಮಾಜಿ ಶಾಸಕರಾಗಿದ್ದ ಯಡಿಯೂರಪ್ಪನವರ ಗಮನಕ್ಕೆ ಈ ವಿಷಯ ಬಂದಾಗ ಅದೇ ದಿನ ತಾಲೂಕು ಕಛೇರಿಯ ಮುಂಭಾಗದಲ್ಲಿ ಪಕ್ಷದ ನೇತೃತ್ವದಲ್ಲಿ ಪಾದಯಾತ್ರೆಯನ್ನು ಮಾಡಿದ್ದು ನಾವು, ಇಂದು ರೈತರು ಬಗರ್ ಹುಕುಂ ಜಾಗದಲ್ಲಿ ಸಾಗುವಳಿ ಮಾಡಿತ್ತಿದ್ದಾರೆ ಎಂದರೆ ಅದು ಹೋರಾಟದ ಫಲ ನಮ್ಮ ಭಾರತೀಯ ಜನತಾ ಪಕ್ಷ ನೇತೃತ್ವ ಕಾರಣ.

ಲೋಕಾಯುಕ್ತ ನ್ಯಾಯಾಲಯದಲ್ಲಿ 17-3-2015, 20-10-2015 ಮತ್ತು 5-7-2016ರಲ್ಲಿ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯು 1378 ಹಕ್ಕು ಪತ್ರವನ್ನು ಮಂಜೂರು ಮಾಡಿತು, ಅದರಲ್ಲಿ ಒಂದೇ ಕುಟುಂಬದವರಿಗೆ ಸುಮಾರು 32ರಿಂದ 35 ಎಕರೆ ಭೂಮಿಯನ್ನು ಮಂಜೂರು ಮಾಡುವ ಕೆಲಸಗಳು ನೆಡೆದಿದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಮುಂದುವರೆಯದೆ ರೀತಿಯಲ್ಲಿ ಈ ಸಮಸ್ಯೆ ಸಮಸ್ಯೆಯಾಗಿ ಉಳಿದಿದೆ ಇದಕ್ಕೆ ನೇರ ಕಾರಣ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಾಡಿದ ತಪ್ಪು ಕೆಲಸಗಳು ಎಂದು ಸಂಸದರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ವನ್ಯಧಾಮದ ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಮಾತನಾಡಿ ‘ಕರ್ನಾಟಕ ಸರ್ಕಾರದ ಆದೇಶದಂತೆ 2019 ರಲ್ಲಿ ಶರಾವತಿ ಕಣಿವೆ ವನ್ಯಧಾಮವನ್ನು 43500 ಹೆಕ್ಟೇರ್‌ನಿಂದ 48500 ಹೆಕ್ಟೇರ್‌ಗೆ ವಿಸ್ತರಿಸಿ ಶರಾವತಿ ಮರುನಾಮಕರಣ ಮಾಡಲಾಯಿತು.
ಕಣಿವೆ ಸಿಂಗಳೀಕ ವನ್ಯಧಾಮವೆಂದು ಪ್ರಸ್ತುತ ಭಾರತ ಸರ್ಕಾರದ 2011 ರ ಪರಿಸರ ಸೂಕ್ಷ್ಮ ಪ್ರದೇಶದ ಆದೇಶದಂತೆ ವನ್ಯಜೀವಿ ಧಾಮದ ಗಡಿಯಿಂದ 10 ಕಿ.ಮೀ ರವರೆಗೆ ಪೂರ್ವ ನಿಯೋಜಿತ ಪರಿಸರ ಸೂಕ್ಷ್ಮ ವಲಯವನ್ನು ಘೋಷಿಸುವಂತೆ ಆದೇಶವಿದ್ದು, ಜಿಲ್ಲಾ ಮಟ್ಟದಲ್ಲಿ ಅರಣ್ಯ ಇಲಾಖೆಯಿಂದ ಈ ಪರಿಸರ ಸೂಕ್ಷ್ಮ ವಲಯವನ್ನು 1 ಕಿ.ಮಿ.ನಿಂದ ಕಿ.ಮಿರವರೆಗೆ ಕಡಿತಗೊಳಿಸಲು ಪ್ರಸ್ತಾವನೆಯನ್ನು ತಯಾರಿಸಲಾಗಿದೆ. ಇದರಿಂದಾಗಿ ವನ್ಯಧಾಮದ ಸುತ್ತಲೂ ಇರುವಂತಹ ಜೋಗ್ ಜಲಪಾತ ಅಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಜಿಲ್ಲೆಯ ಶೆಟ್ಟಿಹಳ್ಳಿ ವನ್ಯಧಾಮದ ಗಡಿ ಗುರುತಿಸುವ ವಿಷಯದಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ 1974 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯವನ್ನು ಘೋಷಿಸಿದ್ದು, ಸದರಿ ಆದೇಶದ ಗಡಿ ವಿವರಣೆಯಂತೆ ಸುಮಾರು 70,000 ಹೆಕ್ಟೇರ್‌ ಅರಣ್ಯ ಪ್ರದೇಶ ಮತ್ತು ಕಂದಾಯ ಭೂಮಿಯನ್ನು ವನ್ಯಧಾಮದ ಗಡಿ ಒಳಗೆ ಬರುವುದೆಂದು ನಿರ್ಧರಿಸಲಾಗಿತ್ತು. ಇದರಿಂದ ಕಂದಾಯ ಭೂಮಿಯಲ್ಲಿ ಆಗಬಹುದಾದಂತಹ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಕಾನೂನಿನಂತೆ ಅಡಚಣೆ ಉಂಟಾಗುತ್ತಿತ್ತು.

ಭಾರತ ಸರ್ಕಾರದ ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್‌ಲೈಫ್ ರವರ 50ನೇ ಸಭೆಯಲ್ಲಿ ಚರ್ಚಿಸಿ ದಿನಾಂಕ 27-09-2018 ರಂದು ಆದೇಶಿಸಿದಂತೆ ಹಾಗೂ ಸನ್ಮಾನ್ಯ ಶ್ರೀ ಬಿ. ಯಡಿಯೂರಪ್ಪ, ಮುಖ್ಯಮಂತ್ರಿಗಳು ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 09-3-2020 ರಂದು ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಆದೇಶಿಸಿದಂತೆ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿಯನ್ನು ಮರುವಿನ್ಯಾಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿರುತ್ತದೆ. ಅದರಂತೆ, ಅರಣ್ಯ ಇಲಾಖೆಯಿಂದ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿಯನ್ನು ಮರುವಿನ್ಯಾಸಗೊಳಿಸಿ 39,564 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಇದರಲ್ಲಿ ಮೂಲ ಅಧಿಸೂಚನೆಯಲ್ಲಿ ಇದ್ದಂತಹ ಅರಣ್ಯ ಕ್ಷೇತ್ರವನ್ನು ಉಳಿಸಿಕೊಂಡು ಕಂದಾಯ ಪ್ರದೇಶ ಮತ್ತು ಖಾಸಗಿ ಜಮೀನುಗಳನ್ನು ಹೊರತುಪಡಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಿಂದಾಗಿ, ವನ್ಯಧಾಮದ ಸುತ್ತಲೂ ಇರುವಂತಹ ಕಂದಾಯ ಭೂಮಿ ಹಾಗೂ ಖಾಸಗಿ ಜಮೀನುಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿದರು.

ವರದಿ ಮಂಜುನಾಥ್ ಶೆಟ್ಟಿ…