ಶಿವಮೊಗ್ಗ: ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಬೇಕು ಮತ್ತು ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಬೇಕು ಎಂದು ಆಗ್ರಹಿಸಿ ಜಿಲ್ಲಾ ಎನ್ ಎಸ್ ಯು ಐ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ದದಲ್ಲಿ ರಾಜ್ಯದ ರಾಣೆಬೆನ್ನೂರು ತಾಲೂಕಿನ ಚಳಗೆರೆ ಗ್ರಾಮದ ಯುವಕ ನವೀನ್ ಮೃತಪಟ್ಟಿದ್ದಾನೆ. ರಾಜ್ಯ ಸರ್ಕಾರ ಕೂಡಲೇ ನವೀನ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಯುದ್ದ ಪೀಡಿತ ಪ್ರದೇಶದಲ್ಲಿ ಇನ್ನೂ ಭಯದಲ್ಲೇ ಇರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಬೇಕು ಎಂದು ಎನ್ಎಯಸ್ಯುೀಐ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಉಕ್ರೇನ್ನತಲ್ಲಿರುವ ಬಹುತೇಕರು ವೈದ್ಯ ಶಿಕ್ಷಣ ಪಡೆಯಲು ಹೋಗಿದ್ದಾರೆ. ಇದಕ್ಕೆ ಕಾರಣ ಭಾರತದಲ್ಲಿ ಮೆಡಿಕಲ್ ಸೀಟ್ ಪಡೆಯಲು ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕಾಗಿದೆ. ಈ ಡೋನೇಷನ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಬಗ್ಗೆ ಎಚ್ಚರ ವಹಿಸಬೇಕು.
ಮತ್ತು ಡೊನೇಷನ್ ಮಾಫಿಯ ತಡೆಗಟ್ಟಬೇಕು ಎಂದು ಮನವಿದಾರರು ಒತ್ತಾಯಿಸಿದ್ದಾರೆ.ಉಕ್ರೇನ್ನುಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿ ಪೂರ್ಣವಾಗದಿದ್ದರೆ ಕಷ್ಟಪಟ್ಟು ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ತೊಂದರೆಯಾಗತ್ತದೆ. ಈ ತೊಂದರೆಗಳನ್ನು ನಿವಾರಿಸುವತ್ತಲು ಕೂಡ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಎನ್ಎಗಸ್ಯುಿಐ ಜಿಲ್ಲಾಧ್ಯಕ್ಷ ಎಸ್.ಎನ್.ವಿಜಯ್ ಕುಮಾರ್, ಪ್ರಮುಖರಾದ ಚರಣ, ರವಿ, ಚಂದ್ರೋಜಿ, ಸಂಜು, ಕಿರಣ, ವಿಕ್ರಮ್, ಮನೋಜ್, ಸುಮನ್, ಸುಹಾಸ್, ಉಪೇಂದ್ರ, ನಾಗೇಂದ್ರ, ಚಂದ್ರು, ಆಯಾಜ್, ಅಜರ್, ಜಿತೇಂದ್ರ, ಅಭಿ, ರಾಘು, ವಿಶ್ವ ಮುಂತಾದವರಿದ್ದರು.