ಶಿವಮೊಗ್ಗದಲ್ಲಿ ಅನಧಿಕೃತವಾಗಿ ಸಿಲಿಂಡರ್ ಬಳಸುತ್ತಿದ್ದ ಮಾಹಿತಿ ಮೇರೆಗೆ ಆಹಾರ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನಗರದ ಗೋಪಾಲ್ ಗೌಡ ಡಿ ಬ್ಲಾಕ್ ನಲ್ಲಿರುವ ಬಡಾವಣೆಯಲ್ಲಿರುವ ನಂದಿನಿ ಮೆಸ್ನಲ್ಲಿ ಅನಧಿಕೃತವಾಗಿ ಸಿಲಿಂಡರನ್ನು ಬಳಸಿದ್ದು ಸಹಾಯಕ ನಿರ್ದೇಶಕರಾದ ಎ ಕೆ ಮಲ್ಲಪ್ಪ ಮತ್ತು ಆಹಾರ ನಿರೀಕ್ಷಕರಾದ ಆರ್ಸಿಯ ತಸ್ಲಿಂ ರವರ ನೇತೃತ್ವದಲ್ಲಿ ದಾಳಿ ನಡೆಸಿ ಸಿಲಿಂಡರನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕೆಲವು ಹೋಟೆಲ್ ಗಳಲ್ಲಿ ಅನಧಿಕೃತವಾಗಿ ಸಿಲಿಂಡರ್ ಬಳಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಬಂದಿದೆ.ಮುಂದಿನ ದಿನದಲ್ಲಿ ಯಾವುದೇ ರೀತಿಯ ಅನಧಿಕೃತ ಸಿಲಿಂಡರ್ ಗಳನ್ನು ಬಳಸಬಾರದೆಂದು ಸೂಚಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.