ಶಿವಮೊಗ್ಗದ ವೃತ್ತ ಕಚೇರಿಯಲ್ಲಿ ಶ್ರೀಮತಿ ಜಯಶ್ರೀ ಎಸ್ ಮಾನೆ ಪೊಲೀಸ್ ವೃತ್ತ ನಿರೀಕ್ಷಕರು ಶಿವಮೊಗ್ಗ ಸಂಚಾರ ವೃತ್ತ ರವರು ಶಿವಮೊಗ್ಗ ನಗರದ ಆಟೋ ಸಂಘದ ಅಧ್ಯಕ್ಷರು/ ಪದಾಧಿಕಾರಿಗಳು ಮತ್ತು ಆಟೋ ಮಾಲೀಕರು / ಚಾಲಕರುಗಳ ಸಭೆಯನ್ನು ನಡೆಸಿದರು.

ಪ್ಯಾಸೆಂಜರ್ ಆಟೋ ಗಳಿಗೆ ಕಡ್ಡಾಯವಾಗಿ ಆಟೋ ಮೀಟರ್ ಗಳನ್ನು ಅಳವಡಿಸುವಂತೆ ಸೂಚನೆಯನ್ನು ನೀಡಿದ್ದು, ಒಂದು ವೇಳೆ ಮುಂದಿನ ದಿನಗಳಲ್ಲಿಯೂ ಸಹ ಆಟೋಗಳಿಗೆ ಮೀಟರ್ ಗಳನ್ನು ಅಳವಡಿಸಿಕೊಳ್ಳದೆ ಚಾಲನೆ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ಆಟೋಗಳನ್ನು ತಡೆದು ಪೊಲೀಸ್ ವಶಕ್ಕೆ ಪಡೆದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ವರದಿ ಪ್ರಜಾ ಶಕ್ತಿ…