ಎಷ್ಟೇ ಎಚ್ಚರಿಕೆ ನೀಡಿದರು ಕಾನೂನುಗಳನ್ನು ವಿವಿಧ ರೀತಿಯಲ್ಲಿ ಮನವರಿಕೆ ಮಾಡಿಕೊಟ್ಟರು ಕೂಡ ಶಿವಮೊಗ್ಗ ನಗರದಲ್ಲಿ ವಾಹನ ಚಲನೆ ಮಾಡುತ್ತಾ ಮೊಬೈಲ್ ಬಳಕೆ ಮಾಡುವುದು ನಿಂತಿಲ್ಲ. ಇಂಥದ್ದೇ ಪ್ರಕರಣ ಒಂದರಲ್ಲಿ ದಿನಾಂಕ 26/10/2023 ರಂದು ಮೊಬೈಲ್ ನಲ್ಲಿ ಮಾತನಾಡುತ್ತಾ ಕ್ರೇನನ್ನು ಚಾಲನೆ ಮಾಡುತ್ತಿದ್ದ ಚಾಲಕನಿಗೆ ಸಂಚಾರಿ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ರಾತ್ರಿ 7. 30 ಸಮಯದಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ತಿರುಮಲೇಶ್ ರವರು ಮೊಬೈಲ್ ನಲ್ಲಿ ಮಾತನಾಡುತ್ತಾ ಚಾಲನೆ ಮಾಡುತ್ತಿದ್ದ ಚಾಲಕನಿಗೆ 5000 ದಂಡ ವಿಧಿಸಿದ್ದಾರೆ.