ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ “ನಿಷ್ಕಾಮ ಸೇವೆ ದ್ಯೇಯದ” ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗೃಹರಕ್ಷಕರಾಗಲು ಬೇಕಾದಆರ್ಹತೆ:-ಭಾರತೀಯ ಪ್ರಜೆಯಾಗಿರಬೇಕು. 19 ವರ್ಷದ ಮೇಲ್ಪಟ್ಟು 45 ವರ್ಷಕ್ಕಿಂತಕಡಿಮೆ ವಯಸ್ಸಿನವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರ ಬೇಕು. ವೈದ್ಯಕೀಯವಾಗಿ ಸಶಕ್ತರಾಗಿರ ಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು / ಆರೋಪ ಅಥವಾ ಅಪರಾಧಿ ಎಂದು ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತರು ನಿಗದಿತ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಿವಮೊಗ್ಗ. 08182 – 295630 & 255630 ಅಥವ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ ಉಪ ಘಟಕಗಳ ಕಛೇರಿಗಳಲ್ಲಿ ಪಡೆದು, ಭರ್ತಿಮಾಡಿದ ಅರ್ಜಿಗಳನ್ನು ಫೆ. 03 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟರು ಡಾ. ಚೇತನ ಹೆಚ್.ಪಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಗೃಹರಕ್ಷಕ ದಳ ಘಟಕ ಉಪ ಘಟಕ ಮತ್ತು ಘಟಕಾಧಿಕಾರಿಗಳು ಮೊಬೈಲ್ ನಂಬರ್‌ನ್ನು ಸಂಪರ್ಕಿಸುವುದು.