ಮಂಜುನಾಥ್ ಶೆಟ್ಟಿ…
ಶ್ರೀ ಸಿಗಂದೂರು ಚೌಡೇಶ್ವರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ. 13 ರಿಂದ 28 ರವರೆಗೆ ಅಗ್ನಿವೀರ್, ಪ್ಯಾರಾ ಮಿಲಿಟರಿ ಮತ್ತು ಪೋಲಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಹಾಗೂ ಅರ್ಜಿಸಲ್ಲಿಸಬಯಸುವವರಿಗೆ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್, ಆನಂದಪುರ ಇವರ ನುರಿತ ತರಬೇತುದಾರರಾದ ಯೋಧರಿಂದ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಉಚಿತ ಊಟ ವಸತಿ ಹಾಗೂ ದೈಹಿಕ ಮತ್ತು ಲಿಖಿತ ತರಬೇತಿಗಳು ಮತ್ತು ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ.
ಈ ತರಬೇತಿಗೆ ಹತ್ತನೇ ತರಗತಿ ಉತ್ತೀರ್ಣ ಹೊಂದಿದ 25 ವರ್ಷ ವಯೋಮಿತಿಯೊಳಗಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸೇರಿಕೊಳ್ಳಬಹುದು. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ರಾಜ್ಯದ ಎಲ್ಲಾ ಆಸಕ್ತ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ದೂ. ಸಂ. 7019776749/ 7406212345/ 9448954052/ 9740980992 ಗಳನ್ನು ಹಾಗೂ https//malnadsoldiercoching.rf.gd. ನ್ನು ಸಂಪರ್ಕಿಸಿ ತಮ್ಮ ಹೆಸರು ಮತ್ತು ಸ್ವವಿವರ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹಾಗೂ ಮಲ್ನಾಡ್ ಸೋಲ್ಡರ್ ಕೋಚಿಂಗ್ ಸೆಂಟರ್ ಎಂದು ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಕೂಡ ಹೆಚ್ಚಿನ ಮಾಹಿತಿಗಳನ್ನು ನೋಡಬಹುದು.