ಮಂಜುನಾಥ್ ಶೆಟ್ಟಿ…

ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.ರಾಗಿಗುಡ್ಡ (ಶಾಂತಿನಗರ) 4ನೇ ಕ್ರಾಸ್ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಕಳಪೆ ಯು.ಜಿ.ಡಿ, ಚರಂಡಿ, ರಸ್ತೆ ಕಾಮಗಾರಿಯನ್ನು ಮಾಡಿಸುತ್ತಿರುವ ಇಂಜಿನಿಯರ್ ಸಂತೋಷ್ ರವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದ ವಾರ್ಡ್ ನಂ..8, ರಾಗಿಗುಡ್ಡ (ಶಾಂತಿನಗರ) 4ನೇ ಕ್ರಾಸ್ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಯು.ಜಿ.ಡಿ, ಚರಂಡಿ, ರಸ್ತೆ ಕಾಮಗಾರಿ ನಡೆಯುತ್ತಿದ್ದು, ವತ್ತುವರಿ ಮಾಡಿರುವ ಚರಂಡಿ ಮತ್ತು ರಸ್ತೆಯ ಜಾಗವನ್ನು ತೆರವುಗೊಳಿಸದೆ ತಮ್ಮ ಪಾಲಿಕೆಯ ಇಂಜಿನಿಯರ್ ಸಂತೋಷ್ ರವರು ಕಾಮಗಾರಿ ಮಾಡಲು ಮುಂದಾದಾಗ ಕರವೆ ಕಾವಲು ಪಡೆಯ ಜಿಲ್ಲಾ ಸಂಘಟನ ಕಾರ್ಯದರ್ಶಿ ರಾಮುರವರು ಕೆಲಸ ನಿಲ್ಲಿಸುವಂತೆ ಮನವಿ ಮಾಡಿದರು.
ಆದರೆ ಈ ವತ್ತುವರಿ ಜಾಗವನ್ನು ತೆರವುಗೊಳಿಸದೆ ಹಿಂದೆ ಇದ್ದ ಹಾಗೆ ಕಾಮಗಾರಿ ಮುಂದುವರೆಸಲು ಈ ಇಂಜಿನಿಯರ್ಗೆ ಗೆ ಸೂಚಿಸಿದವರು ಯಾರು ಎಂದರು.ಆಯುಕ್ತರು ಈ ಕಾಮಗಾರಿಯನ್ನು ವತ್ತುವರಿ ತೆರವುಗಳಿಸಿ ರಸ್ತೆ ಅಗಲೀಕರಣ ಮಾಡುತ್ತೇವೆ ಎಂದು ಹೇಳಿ ಈಗ ಮೌನವಾಗಿರುವುದು ಏಕೆ ಪ್ರಶ್ನಿಸಿದರು.ಈ ಇಬ್ಬರ ಹಿಂದೆ ವ್ಯಕ್ತಿಯಾರು ಗೊತ್ತಾಗಬೇಕಾಗಿದೆ ಎಂದರು.ಅಲ್ಲದೆ ಸದರಿ ರಸ್ತೆಯಲ್ಲಿ ವಾಸವಾಗಿರುವ ರಾಮಣ್ಣ ರವರಿಗೆ ಏನಾದರು ಜೀವಕ್ಕೆ ತೊಂದರೆ ಆದರೆ ಇದರ ಜವಾಬ್ದಾರಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಆಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯವರೆ ನೇರ. ಹೊಣೆಗಾರರು ಎಂದರು.
ಆದಷ್ಟು ಬೇಗ ಸಮಯಕ್ಕೆ ಬಗೆಹರಿಸಿ ದ್ದಿದ್ದಲ್ಲಿ ಮುಂದಿನ ಮುಂದಿನ ದಿನಗಳಲ್ಲಿ ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ದ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಕರ್ನಾಟಕ ರಕ್ಷಣ ವೇದಿಕೆ ಕಾವಲು ಪಡೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾಧ್ಯಕ್ಷರು ಎಸ್.ಬಿ.ಶಿವಕುಮಾರ್S.P.
ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ.ಬಿ
ಉಪಾಧ್ಯಕ್ಷರು ರಮೇಶ್
ಜಿಲ್ಲಾ ಸಂಘಟನ ಕಾರ್ಯದರ್ಶಿ ರಾಮಣ್ಣ ರಾಗಿಗುಡ್ಡ ಮಾಧ್ಯಮ ಸಲಹೆಗಾರರು
ಎನ್.ಮಾಲತೇಶ್ ಉಪಾಧ್ಯಕ್ಷರು ಗಣೇಶ್ ಪಿಳ್ಳಂಗೆರೆಜಿಲ್ಲಾ
ಸಂಚಾಲಕರು ರಾಮು.ವಿ. ಶಿವಣ್ಣ ಕಾಶಿಪುರ. ಸಂಕೇಶ್ವರ. ಅಶೋಕ್ ಇನ್ನು ಮುಂತಾದರು ಭಾಗವಹಿಸಿದ್ದರು.