ಮಂಜುನಾಥ್ ಶೆಟ್ಟಿ…

ಶಿವಮೊಗ್ಗ : ನಗರದ ಮಾರ್ನಾಮಿಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಎಂ.ಶ್ರೀಕಾಂತ್‌ರವರ ಸಮಾಜಮುಖಿ ಸೇವೆಯ ಸ್ಮರಣಾರ್ಥ ಗಾರಾ.ಫೌಂಡೇಶನ್ ವತಿಯಿಂದ ಉಚಿತವಾಗಿ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ಪೈಜುನ್ನಿಸಾರವರು ಮಾತಾನಾಡಿ ಮಾರ್ನಾಮಿಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸ್ವತಂತ್ರಪೂರ್ವದ್ದಾಗಿದ್ದು ಮುಂದಿನ ೨೦೩೦ಕ್ಕೆ ನೂರು ವರ್ಷಗಳಾಗುತ್ತದೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಈ ಶಾಲೆಯಲ್ಲಿ ಓದಿದವರು ಬಹುರಂಗಗಳಲ್ಲಿ ಉನ್ನತವಾದ ಸ್ಥಾನಗಳಲ್ಲಿದ್ದಾರೆ, ಇದೊಂದು ಇತಿಹಾಸ ಸೃಷ್ಟಿಸಿದ ಶಾಲೆಯು ಹೌದು ಎಂದು ತಿಳಿಸಿದರು, ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಈ ಹೊತ್ತಿನ ಮಕ್ಕಳ ವ್ಯಾಸಾಂಗಕ್ಕೆ ಆಗಾಗ್ಗೆ ಸೇವೆಯನ್ನು ಸಲ್ಲಿಸುತ್ತಿರುವ ಗಾರಾ.ಶ್ರೀನಿವಾಸ್ ಹಾಗೂ ಶಿವಾಜಿ ಅವರುಗಳಿಗೆ ಈ ಸಂದರ್ಭದಲ್ಲಿ ಹಾರೈಸಿದರು,

ಇನ್ನೂ ಈ ಸಂದರ್ಭದಲ್ಲಿ ಮಾತಾನಾಡಿದ ಗಾರಾ ಫೌಂಡೇಶನ್‌ನ ವ್ಯವಸ್ಥಾಪಕರಾದ ಗಾರಾ.ಶ್ರೀನಿವಾಸ್ ಅವರು ಶಿಕ್ಷಣ ಎನ್ನುವುದು ಪ್ರತಿ ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರ ತೆಗೆಯುವ ಕ್ರಿಯೇ ಹಾಗೂ ಅದನ್ನು ಗುರುತಿಸಿ ಪೋಷಿಸುವುದು ಕೂಡ ನಿಜದ ಶಿಕ್ಷಣ ಎಂದರು.

ಪ್ರತಿ ನೋಟ್‌ಬುಕ್‌ಗಳು ಖಾಲಿಯಾಗಿಯೇ ಇರುತ್ತದೆ, ಈ ಖಾಲಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡುವುದು ಮಾದರಿ ವ್ಯಾಸಾಂಗಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದರು, ಎಂ.ಶ್ರೀಕಾಂತ್ ಅವರ ಸೇವೆಗಳನ್ನು ಈ ಮಲೆನಾಡು ಎಂದಿಗೂ ಮರೆಯುವಂತಹದ್ದಲ್ಲ ವಿವಿಧ ಬಗೆಯ ಅನೇಕತೆಗಳಲ್ಲಿ ಬಹುಮುಖಿಯಾಗಿ, ಜಾತ್ಯಾತೀತ, ಪಕ್ಷಾತೀತವಾಗಿ ನಾಗರೀಕ ಸ್ಪಂದನೆಗೆ ಸ್ಪಂದಿಸಿರುವ ಅವರ ನಿರಂತರವಾದ ೨೫ ವರುಷದ ಸೇವೋನ್ಮುಖಿಯನ್ನು ಸ್ಮರಿಸಿ ಈ ಕಾರ್ಯಕ್ರಮವನ್ನು ಗಾರಾ.ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಲಲೀತಮ್ಮ, ರಂಜಿತಾ, ಹಾಗೂ ಮಲೆನಾಡಿನ ಉದ್ಯಮಿ ಕೆ.ಶಿವಾಜಿ, ಸಮಾಜಸೇವಕರಾದ ಎನ್.ಎಂ ಸಿಬ್ಗತ್‌ಉಲ್ಲಾ, ಗೋಲ್ಡ್ ಸ್ಮಿತ್ ಅನಿಲ್‌ಕುಮಾರ್ ಹೆಚ್.ಎಲ್ ರವರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *