Category: Shivamogga

ಭಾನುವಾರವೆಂದು ಅವಧಿ ಮೀರಿ ವ್ಯವಹಾರ ನಡೆಸುತ್ತಿದ್ದ ಮಾಂಸದಂಗಡಿಗಳು.

ಹಲವು ಕಡೆ ನಗರದಲ್ಲಿ ಭಾನುವಾರವಾದ್ದರಿಂದ ಮಾಂಸದಂಗಡಿಗಳು ಹತ್ತು ಗಂಟೆ ಕಳೆದರೂ ವ್ಯಾಪಾರ ಮಾಡುತ್ತಿದ್ದು ಕಂಡುಬಂತು . ಗೋಪಾಲಗೌಡ ಬಡಾವಣೆಯಲ್ಲಿ ಹತ್ತು ಗಂಟೆಯ ಬಳಿಕವೂ ತೆರೆದಿದ್ದ ಮಾಂಸದಂಗಡಿಗೆ ಪೋಲಿಸರು ಬಂದು ದಂಡ ಹಾಕಿ ಮುಚ್ಚಿಸಿದ ಘಟನೆಯೂ ನಡೆಯಿತು .ವರದಿ ಮಂಜುನಾಥ್ ಸಿಟಿ ಶಿವಮೊಗ್ಗ

ತಾತ್ಕಾಲಿಕ ನೌಕರರಿಗೆ ಐಡಿ ಕಾರ್ಡ್ ನೀಡದ ಮೆಗ್ಗಾನ್ ಆಡಳಿತ ಮಂಡಳಿ, ಪೊಲೀಸರಿಗೆ ಗೊಂದಲ

ಮೆಗಾನ್ ಆಡಳಿತ ಮಂಡಳಿಯು ತನ್ನ ತಾತ್ಕಾಲಿಕ ನೌಕರರಿಗೆ ಐಡಿ ಕಾರ್ಡ್ ನೀಡದೆ ಗೊಂದಲಕ್ಕೆ ಕಾರಣವಾಗಿದೆ. ನಗರದಾದ್ಯಂತ ಹಲವು ಭಾಗಗಳಲ್ಲಿ ತಾತ್ಕಾಲಿಕ ನೌಕರರು ಹೋಗುವಾಗ ಐಡಿ ಕಾರ್ಡ್ ಇಲ್ಲದೆ ಪೊಲೀಸರ ಹಾಗೂ ನೌಕರರ ಮಧ್ಯೆ ಗೊಂದಲ ಏರ್ಪಟ್ಟಿದೆ. ಇದರಿಂದ ನೌಕರರಿಗೆ ತೊಂದರೆಯಾಗುತ್ತಿದ್ದು. ಇದರ…

ಮುತ್ತಪ್ಪ ರೈ ಅವರ ಪುಣ್ಯತಿಥಿಯನ್ನು ರಾಜ್ಯಾದ್ಯಂತ ವೃಕ್ಷ ಅಭಿಯಾನದ ಮೂಲಕ ಆಚರಿಸಿ : ಡಾ ಬಿ ಎನ್ ಜಗದೀಶ್

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಮುತ್ತಪ್ಪ ರೈ ಅವರ ಪುಣ್ಯತಿಥಿಯ ಪ್ರಯುಕ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ ಬಿ ಎನ್ ಜಗದೀಶ್ ರವರು ಇಂದು ರಾಜ್ಯಾದ್ಯಂತ ವೃಕ್ಷ ಅಭಿಯಾನ ಮಾಡಲು ಕರೆ ಕೊಟ್ಟಿದ್ದರು . ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ನಾಜಿಮಾ…

ತೀರ್ಥಹಳ್ಳಿಯ ಕೊಗ್ರೆ ಸಮೀಪ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯೋರ್ವರ ಅತ್ಯಸಂಸ್ಕಾರವನ್ನ ದೇಶಕ್ಕಾಗಿ ನಾವು ಸಂಘಟನೆ ವತಿಯಿಂದ ಮಾಡಲಾಯಿತು…

ತೀರ್ಥಹಳ್ಳಿಯ ಕೊಗ್ರೆ ಸಮೀಪ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯೋರ್ವರ ಅತ್ಯಸಂಸ್ಕಾರವನ್ನ ದೇಶಕ್ಕಾಗಿ ನಾವು ಸಂಘಟನೆ ವತಿಯಿಂದ ಮಾಡಲಾಯಿತು…ಈ ಕಾರ್ಯಕ್ಕೆ ಸುಭಾಷ್ ಕುಲಾಲ್ ರಂಜಿತ್ ಶೆಟ್ಟಿ ಪೂರ್ಣೇಶ್ ಕೆಳಕೆರೆ ಸುಪ್ರೀತ್ ಅಭಿಗೌಡ ಸಹಕರಿಸಿದರು. ಯಾವುದೇ ತುರ್ತು ಸಂಧರ್ಭದಲ್ಲಿ ಸಹಾಯಕ್ಕಾಗಿ ದೇಶಕ್ಕಾಗಿ ನಾವು ಸಂಘಟನೆಯನ್ನ…

ಅನಗತ್ಯವಾಗಿ ಹೊರಗೆ ಬಂದ್ರೆ ವಾಹನಗಳಿಗೆ ದಂಡ ಗ್ಯಾರಂಟಿ

ಇಂದು ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ಪೊಲೀಸರು ಕಟ್ಟೆಚ್ಚರದಿಂದ ತಪಾಸಣೆ ನಡೆಸಿದರು . ಅನಗತ್ಯವಾಗಿ ಮನೆಯಿಂದ ಹೊರಗೆ ಬಂದವರಿಗೆ ಸೂಕ್ತ ಕಾರಣ ನೀಡದೆ ಇದ್ದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಬಹುತೇಕರು ವೈದ್ಯಕೀಯ ಕಾರಣ ನೀಡಿದರೂ ಕೂಡ ಸಂಬಂಧಪಟ್ಟ ದಾಖಲೆಗಳನ್ನು ಕೇಳಲಾಗಿದೆ. ಆದ್ದರಿಂದ…

ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ತೀರ್ಥಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತರು

ತೀರ್ಥಹಳ್ಳಿ ಕೆಪಿಸಿಸಿ ಅಧ್ಯಕ್ಷರು ನೆಚ್ಚಿನ ನಾಯಕರು ಶ್ರೀಯುತ ಡಿ ಕೆ ಶಿವಕುಮಾರ್ ಅವರ 60 ನೇ ಹುಟ್ಟುಹಬ್ಬದ ಪ್ರಯುಕ್ತ ನೆಚ್ಚಿನ ನಾಯಕರು ಮಾರ್ಗದರ್ಶಕರು ಶ್ರೀಯುತ ಆರ್ ಎಂ ಮಂಜುನಾಥ ಗೌಡರ ನೇತೃತ್ವದಲ್ಲಿ ಪಟ್ಟಣದ ಜೆಸಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಹಂಚಲಾಯಿತು…

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದ ಜನರ ಸಹಕಾರ ಹೀಗೆ ಮುಂದುವರೆಯಲಿ ಎಂದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯ ಸ್ಥಿತಿಗತಿಗಳನ್ನು ತಿಳಿಸಿದರು. ಭದ್ರಾವತಿಯ VSIL ಪೂರ್ತಿಯಾಗಿ ಆಕ್ಸಿಜನ್ ತಯಾರಿಕೆಯಲ್ಲಿ ನಿರತವಾಗಿದೆ . ಶಿವಮೊಗ್ಗದಲ್ಲಿ ಕರೋನ ಲಸಿಕೆಯ ಬ್ಲಾಕ್ ಮಾರ್ಕೆಟ್ ತಡೆಯಲು ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ . ಜಿಲ್ಲೆಯಲ್ಲಿ ಒಟ್ಟು…

ಭಾನುವಾರ ಆಯನೂರು ಸಂಪೂರ್ಣ ಬಂದ್

ಹೆಚ್ಚುತ್ತಿರುವ ಕೋವಿಡ ನಿಂದಾಗಿ ಇಂದು ನಡೆದ ಆಯನೂರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಭಾನುವಾರದಂದು ಆಯನೂರನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು . ಆಯನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗೇಂದ್ರ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ PDO ಶಶಿಕಲಾ ಹಾಗೂ…

ಜಿಲ್ಲಾಡಳಿತವು ಈ ಕೂಡಲೇ ಸಭಾಭವನಗಳಲ್ಲಿ ಕೋವಿಡ ಕೇಂದ್ರ ಆರಂಭಿಸಬೇಕು : ಡಾ|| ಸತೀಶ್ ಕುಮಾರ್ ಶೆಟ್ಟಿ

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಸಂಘಟನಾ ಕಾರ್ಯದರ್ಶಿ ಹಾಗೂ ಶಿವಮೊಗ್ಗದ ಫಾರ್ಮಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾದ ಡಾ|| ಸತೀಶ್ ಕುಮಾರ್ ಶೆಟ್ಟಿಯವರು ಕರೋನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ವಿಡಿಯೋ ನೋಡಿವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರ ಮೇಲೆ ತನಿಖೆ ಖಂಡಿಸಿ ಪ್ರತಿಭಟನೆ

ನವದೆಹಲಿಯಲ್ಲಿ ಕೋವಿಡ ಪೇಷೆಂಟ್ ಗಳಿಗೆ ಮೆಡಿಷನ್, ಆಕ್ಸಿಜನ್ ಹಾಗೂ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಅವರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಆದೇಶ ಮೇರೆಗೆ ದೆಹಲಿ ಪೊಲೀಸ್ ಮೂಲಕ ತನಿಖೆ ನಡೆಸುತ್ತಿರುವುದನ್ನು ಖಂಡಿಸಿಇಂದು…