ಶಿವಮೊಗ್ಗ: ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಯುನಿಸೆಫ್ ಯೋಜನೆ ವತಿಯಿಂದ ಪ್ರಕಟಿಸಿದ ಘನತೆಯ ಬದುಕು –ಮಾಧ್ಯಮ ಮತ್ತು ಮಕ್ಕಳು ಒಂದು ಕೈಪಿಡಿ ಎಂಬ ಪುಸ್ತಕವನ್ನು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಬಿಡುಗಡೆ ಮಾಡಿದರು.

ಮಕ್ಕಳ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರವೇನು? ಮಕ್ಕಳ ಬಗ್ಗೆ ವರದಿ ಮಾಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು? ಮತ್ತು ಜೆಜೆ ಆಕ್ಟ್ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಇರುವ ರಾಘವೇಂದ್ರ ಭಟ್ ಬರೆದಿರುವ 70 ಪುಟಗಳ ಪುಸ್ತಕ ಇದಾಗಿದೆ.ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ,ಮಾಧ್ಯಮಗಳು ಮಕ್ಕಳ ಬಗ್ಗೆ ವರದಿ ಮಾಡುವ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಇರುವ ಕಾನೂನುಗಳ ಬಗ್ಗೆ ಕೂಡ ಸಂಪೂರ್ಣವಾಗಿ ಅರಿವು ಹೊಂದಿರಬೇಕು.

ಸರ್ಕಾರ ಮಕ್ಕಳ ಹಕ್ಕು ರಕ್ಷಣೆಗೆ ಅನೇಕ ಕಾನೂನುಗಳು ರಚಿಸಿದ್ದು, ಮಕ್ಕಳ ಹಕ್ಕಿಗೆ ಧಕ್ಕೆಯಾಗುವಂತಹ ವರದಿಗಳು ಪ್ರಕಟವಾದರೆ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಪುಸ್ತಕದಲ್ಲಿ ಎಲ್ಲಾ ವಿವರ ಒಳಗೊಂಡಿದೆ ಎಂದರು.ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸರಸ್ವತಿ ಮಾತನಾಡಿ, ಜನರಿಗೆ ಅರ್ಥವಾಗುವ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕು. ಎಲ್ಲೂ ಕೂಡ ಮಕ್ಕಳ ಹಕ್ಕಿಗೆ ಚ್ಯತಿ ಆಗಬಾರದು. ಕೆಲವೊಂದು ಸಂದರ್ಭದಲ್ಲಿ ಅಧ್ಯಯನ ಇಲ್ಲದೆ, ಸಂಪೂರ್ಣ ಪರಾಮರ್ಶೆ ಮಾಡದೇ ವರದಿಗಳು ಪ್ರಕಟವಾದಲ್ಲಿ ಸಮಾಜಕ್ಕೆ ತಪ್ಪು ಮಾಹಿತಿ ಹೋಗುತ್ತದೆ.

ಈ ರೀತಿ ಅನೇಕ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಆದ್ದರಿಂದ ಮಾಧ್ಯಮದವರು ಇಂತಹ ಪುಸ್ತಕಗಳನ್ನು ಅಭ್ಯಸಿಸಬೇಕು ಎಂದರು.ಈ ಸಂದರ್ಭದಲ್ಲಿ ಮಕ್ಕಳ ಹಕ್ಕು ಸಮಿತಿ ಅಧ್ಯಕ್ಷೆ ರೇಖಾ ಮಾತನಾಡಿ, ಮಕ್ಕಳ ಹಕ್ಕು ಸಮಿತಿ ಆಲ್ಕೊಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದು, ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರನ್ನು ಹೊಂದಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ಎಂ.ಎಲ್. ವೈಶಾಲಿ, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶೀಲಾ ಸುರೇಶ್, ರೇಣುಕಮ್ಮ, ಪ್ರತಿಭಾ ಇದ್ದರು.  

ವರದಿ ಮಂಜುನಾಥ್ ಶೆಟ್ಟಿ…