ಮಂಜುನಾಥ್ ಶೆಟ್ಟಿ…
2026 ರ ಫೆಬ್ರವರಿ/ಮಾರ್ಚ್ ನಲ್ಲಿ ನಡೆಯುವ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಕುರಿತು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ: 17-02-2026 ರಂದು ನಡೆಯುವ ಸಭೆಗೆ ಮಾಹಿತಿ.
ಕ್ರ.ಸಂ.
ವಿಷಯ
IInd PUC
SSLC
01.
ಪರೀಕ್ಷಾ ದಿನಾಂಕ
28.02.2026
18-03-2026 80
80 17.03.2026
02.04.2026
ಪರೀಕ್ಷಾ ಸಮಯ
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15
02.
ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
7,10,363
9,02,889
03.
- ಹೊಸಬರು
6,46,801
8,12,855 - ಪುನರಾವರ್ತಿತ
50,540
62,845 - ಖಾಸಗಿ ಅಭ್ಯರ್ಥಿಗಳು
13,022
27,189
ಸಂಯೋಜನಾವಾರು ವಿದ್ಯಾರ್ಥಿಗಳು - ವಿಜ್ಞಾನ
2,92,645
04.
2.
2,11,174
ಅನ್ವಯಿಸುವುದಿಲ್ಲ - ಕಲಾ
1,42,982
05.
ಪರೀಕ್ಷೆಗೆ ನೋಂದಾಯಿಸಿಕೊಂಡ ಒಟ್ಟು ಕಾಲೇಜುಗಳ/ಶಾಲೆಗಳ ಸಂಖ್ಯೆ
5174
15,941
06.
ಪರೀಕ್ಷಾ ಕೇಂದ್ರಗಳ ಸಂಖ್ಯೆ
1217
2871
07.
ಫಲಿತಾಂಶ ಪ್ರಕಟಿಸುವ ಸಂಭಾವ್ಯ ದಿನಾಂಕ
07.04.2026
24.04.2026
08.
ಪರೀಕ್ಷೆ-2ರ ದಿನಾಂಕ
25.04.2026 80
18.05.2026 8
09.
ಪರೀಕ್ಷೆ -2 ರ ಫಲಿತಾಂಶ ಪ್ರಕಟಿಸುವ ಸಂಭಾವ್ಯ ದಿನಾಂಕ
09.05.2026
25.05.2026
22.05.2026
1.06.2026
- ಮಂಡಲಿಯ ಜಾಲತಾಣದಲ್ಲಿನ Student Corner ಅಡಿಯಲ್ಲಿ ಪರೀಕ್ಷೆಗೆ ತಯಾರು ជួយ ជ Blueprint, Model Question Papers, Exhaustive Question Bank, Previous year Question Papers along with Key answers and centum papers ಗಳನ್ನು ಲಭ್ಯಗೊಳಿಸಲಾಗಿದೆ.
- ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ವೃದ್ಧಿಗಾಗಿ ಇಲಾಖೆಯ ಹಂತದಲ್ಲಿ ಕಾರ್ಯಗಾರಗಳು ಮತ್ತು ಸಭೆಗಳನ್ನು ನಿರಂತರವಾಗಿ ನಡೆಸಲಾಗಿದೆ.
- ಪೋಷಕರ ಸಭೆಗಳನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪೋಷಕರಿಗೆ ತಿಳಿಸಲಾಗಿದೆ.
- 2025-26ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ.
- ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇದೇ ಮೊದಲಬಾರಿಗೆ ಅವಕಾಶ ನೀಡಲಾಗಿತ್ತು.
ಖಾಸಗಿ ಅಭ್ಯರ್ಥಿಗಳು ತಾವು ಅಯ್ಕೆ ಮಾಡಿಕೊಂಡ ತಾಲ್ಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು/ ಶಾಲೆಗಳಿಗೆ ಮಂಡಲಿಯಿಂದ randamise ಅಗಿ ಹಂಚಿಕೆ ಮಾಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂತಿಮ ಪ್ರವೇಶ ಪತ್ರಗಳನ್ನು ಲಭ್ಯಗೊಳಿಸಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಮಾರ್ಚ್ ಮೊದಲ ವಾರದಲ್ಲಿ ಅಂತಿಮ ಪ್ರವೇಶ ಪತ್ರಗಳನ್ನು ನೀಡಲಾಗುವುದು. - ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ತೋರಿಸಿದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
- ವೆಬ್ ಕ್ಯಾಸ್ಟಿಂಗ್ ಮುಖಾಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
- ಪರೀಕ್ಷೆ ನಡೆಸಲು ಬೇಕಾಗಿರುವ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು.
- ಪರೀಕ್ಷಾ ದಿನಗಳಂದು ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದರಿಂದ, ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್/ಸೈಬರ್/ ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಿಸಲು ಕ್ರಮವಹಿಸಲಾಗುವುದು.
- ಸಾಮಾಜಿಕ ಜಾಲತಾಣದ ಮೂಲಕ ಉದಾಹರಣೆಗೆ ವಾಟ್ಸಾಪ್/ಟೆಲಿಗ್ರಾಮ್/ಇನ್ಸಾಗ್ರಾಮ್/ಫೇಸ್‌ಬುಕ್/ಯೂಟ್ಯೂಬ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿಯನ್ನು ಹಬ್ಬಿಸಿ ಅಥವಾ ನಕಲಿ ಪ್ರಶ್ನೆ ಪತ್ರಿಕೆಗಳ ಮೂಲಕ ಆರ್ಥಿಕ ಲಾಭಕ್ಕಾಗಿ ವಹಿವಾಟುಗಳನ್ನು ನಡೆಸುವ ವ್ಯಕ್ತಿಗಳು ಮತ್ತು ಅವರ ಅಕೌಂಟ್‌ಗಳನ್ನು ಸಹ ನಿರ್ಬಂಧಿಸಲಾಗುವುದು ಮತ್ತು ಅವರುಗಳ ಮೇಲೆ ಹಾಗೂ ಪ್ರಶ್ನೆಪತ್ರಿಕೆಗಳ ಸೋರಿಕೆಯಂತಹ ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಶಿಕ್ಷಣ ಕಾಯ್ದೆ ಅಡಿಯಲ್ಲಿ ಅಗತ್ಯ ಕ್ರಮವಹಿಸಲಾಗುವುದು.
- ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅರೆ ಸರ್ಕಾರಿ ಪತ್ರಗಳ ಮೂಲಕ ಅಗತ್ಯಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪರೀಕ್ಷೆಗಳ ಪೂರ್ವ ತಯಾರಿಯನ್ನು ಜಿಲ್ಲಾ ಹಂತದಲ್ಲಿ ಮಾಡಿಕೊಳ್ಳಲು ಜಿಲ್ಲಾ ಉಪನಿರ್ದೇಶಕರು (ಆಡಳಿತ), (ಅಭಿವೃದ್ಧಿ) ಮತ್ತು (ಪದವಿ ಪೂರ್ವ) ರವರುಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದು ಮತ್ತು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.