Month: August 2022

ಆಗಸ್ಟ್ 15ರಂದು ಬಸವ ಕೇಂದ್ರದಲ್ಲಿ 75 ಜನರಿಂದ ರಕ್ತದಾನ ಶಿಬಿರ-ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ…

ಶಿವಮೊಗ್ಗ: ಒಂದು ದೇಶ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಜಾಗತಿಕ ಇತಿಹಾಸದಲ್ಲಿ ಬೆರಗುಗೊಳಿಸುವ ಸಂಗತಿಯಾಗಿದೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ಜನರಿಂದ ರಕ್ತದಾನ ಶಿಬಿರವನ್ನು ಬಸವ ಕೇಂದ್ರದಲ್ಲಿ ಆ. 15 ರಂದು ಆಯೋಜಿಸಲಾಗಿದೆ…

ಶಿವಮೊಗ್ಗ ಶಿಕಾರಿಪುರ ರಾಣಿಬೆನ್ನೂರು ಹೊಸ ರೈಲು ಮಾರ್ಗಕ್ಕೆ 535ಕೋಟಿ ಟೆಂಡರ್ ಕರೆಯಲಾಗಿದೆ-ಸಂಸದ ಬಿ.ವೈ. ರಾಘವೇಂದ್ರ…

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಸಂಸದರಾದ ಮೇಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳನ್ನ ಕೈಗೊಂಡಿದ್ದು, ಹಲವು…

ಆಗಸ್ಟ್ 14ರಂದು ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸರ್ವ ಸದಸ್ಯರ ಸಭೆ…

ಶಿವಮೊಗ್ಗ: ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯು ಪ್ರಸಕ್ತ ಸಾಲಿನಲ್ಲಿ 37 ಕೋ.ರೂ.ಗಳಷ್ಟು ನಿವ್ವಳ ಲಾಭಗಳಿಸಿದ್ದು, 2021-22ನೇ ಸಾಲಿನ ಆಡಿಟ್ ವರ್ಗೀಕರಣದಲ್ಲಿ `ಬಿ’ ತರಗತಿಯ ಶ್ರೇಣಿಯನ್ನು ಪಡೆದಿದೆ ಎಂದು ಸೊಸೈಟಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು. ಅವರು ಇಂದು ಮೀಡಿಯಾ ಹೌಸ್‍ನಲ್ಲಿ ಕರೆದಿದ್ದ…

ರೈತರ ಉತ್ಪನ್ನಗಳಿಗೆ ಬೆಲೆ ಭದ್ರತೆ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ…

ಶಿವಮೊಗ್ಗ: ರೈತರ ಉತ್ಪನ್ನಗಳಿಗೆ ಬೆಲೆ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಇಂದು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿದ ಮೂಲಕ ಪ್ರಧಾನ…

ಗುರುಸ್ವಾಮಿ ರೋಜಾ ಷಣ್ಮುಗಂ ನಿಧನ…

ಶಿವಮೊಗ್ಗದ ಗುರುಸ್ವಾಮಿ ರೋಜಾ ಷಣ್ಮುಗಂ ರವರು ನಿಧನರಾಗಿದ್ದಾರೆ.ರಾತ್ರಿ 12 ಗಂಟೆಗೆ ಹೃದಯಘಾತ ಎಂದು ತಿಳಿದುಬಂದಿದೆ.ಸುಮಾರು 55 ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆದರಣೆ ಮಾಡುತ್ತಾ ಬಂದಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಮೊಗ್ಗದ ಪ್ರಧಾನ ಗುರು ಸ್ವಾಮಿ ಎಂದೆ ಹೆಸರಾದವರು. ಇವರ ಆತ್ಮಕ್ಕೆ…

ಸಿಡಾಕ್ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿ ಆಹ್ವಾನ…

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್ (ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವ ಶಿವಮೊಗ್ಗ ಜಿಲ್ಲೆಯ ಆಸಕ್ತ ಉದ್ಯಮಾಕಾಂಕ್ಷಿಗಳಿಗೆ ಸೆಪ್ಟಂಬರ್-2022 ತಿಂಗಳಿನಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಗಾಗಿ 18 ರಿಂದ…

ಮುಸುಕಿನ ಜೋಳ ಬೆಳೆಗೆ ವಿಮೆ ಕ್ಲೈಂಗೆ ಅರ್ಜಿ ಆಹ್ವಾನ…

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2022ರ ಮುಂಗಾರು ಹಂಗಾಮಿನಲ್ಲಿ ಮುಸುಕಿನಜೋಳ ಬೆಳೆಗೆ ಬೆಳೆ ವಿಮೆ ನೋಂದಣಿ ಮಾಡಿಸಿರುವ ರೈತರು ಒಂದು ವೇಳೆ ಬೆಳೆ ಸಂಪೂರ್ಣ ಹಾನಿಯಾಗಿದ್ದಲ್ಲಿ ಸ್ಥಳೀಯ ಪ್ರಕೃತಿ ವಿಕೋಪ ಘಟಕದಡಿ ವಿಮಾ ಸಂಸ್ಥೆಯಿಂದ ಪರಿಹಾರಕ್ಕಾಗಿ ವಿಮೆಗೆ ನೋಂದಣಿ ಮಾಡಿಸಿರುವ…

ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರಿಂದ ಚಾಲನೆ…

ಶಿವಮೊಗ್ಗ : ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನವು ದೇಶವ್ಯಾಪಿಯಾಗಿ ನೆಡೆಯಲಿದ್ದು, ಭಾರತ ಸರ್ಕಾರ, ಕೇಂದ್ರ ಸಂವಹನ ಶಾಖೆ, ಶಿವಮೊಗ ಕರ್ನಾಟಕ ವಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯ ವತಿಯಿಂದ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ…

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಅಂಗವಾಗಿ ASP ಮತ್ತು DYSPಗೆ ರಾಕಿ ಕಟ್ಟಿ ಶುಭ ಹಾರೈಕೆ…

ಶಿವಮೊಗ್ಗ: ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಅಂಗವಾಗಿ ಡಾ. ವಿಕ್ರಮ್ ಆಮಟೆ, ಡಿವೈಎಸ್ಪಿ ಬಾಲರಾಜ್, ಹಾಗೂ ಆರಕ್ಷಕ ಸಿಬ್ಬಂದಿಗೆ ರಾಖಿ ಕಟ್ಟಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮಿಪತಿ, ನಗರ…

ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಲು ಒತ್ತಾಯಿಸಿ ಆಗಸ್ಟ್ 24ರಂದು ಬೃಹತ್ ರ್ಯಾಲಿ-ಶ್ರೀ ಬಸವ ಜೆಯಮೃತ್ಯುಂಜಯ ಸ್ವಾಮೀಜಿ…

ಶಿವಮೊಗ್ಗ: ಪಂಚಮಸಾಲಿ ಸಮಾಜವನ್ನು 2 ಎ ಗೆ ಸೇರಿಸಬೇಕೆಂದು ಒತ್ತಾಯಿಸಿ ಆಗಸ್ಟ್ 24 ರಂದು ಶಿವಮೊಗ್ಗದಲ್ಲಿ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೂಲಕ ಸರ್ಕಾರಕ್ಕೆ ಜ್ಞಾಪಕಪತ್ರ ಸಲ್ಲಿಸಲಾಗುವುದು ಎಂದು ಅಖಿಲ ಭಾರತ…